ಬೆಂಗಳೂರು: ಕಲ್ಬುರ್ಗಿ ಸಮೀಪದ ರಾಜಪೂರದಲ್ಲಿರುವ ಶ್ರೀ ಬೀರಲಿಂಗೇಶ್ವರ ವಸತಿ ನಿಲಯ ಮತ್ತು ಬೀರಲಿಂಗೇಶ್ವರ ದೇವಸ್ಥಾನದ ಸರ್ವೇ ನಂಬರ್ 7,8/1 ಒಟ್ಟು 03 ಎಕರೆ 7 ಗುಂಟೆ ಜಮೀನು ನೂರಾರು ವರ್ಷಗಳಿಂದ ಸಂಘದ ಅಧೀನದಲ್ಲಿ ಇದ್ದು ಆದರೆ ಸಂಘದ ಹೆಸರಿನಲ್ಲಿ ಪಾಣಿ ದಾಖಲಾತಿ ಸಂಘದ ಹೆಸರಿನಲ್ಲಿ ಇರಲಿಲ್ಲ ಈ ಜಾಗ ಸರ್ಕಾರದ ಹೆಸರಿನಲಿದ್ದು ಸುಮಾರು 20 ವರ್ಷಗಳಿಂದ ಹೋರಾಟ ಮನವಿಗಳನ್ನು ಕೊಡುತ್ತಾ ಬಂದಿದ್ದೇವೆ ಆದರೆ ದಿನಾಂಕ 30 -06- 2023 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘ ಕಲ್ಬುರ್ಗಿ ಜಿಲ್ಲೆ ಶಾಖೆ ನೇತೃತ್ವದಲ್ಲಿ ಮನವಿ ಮಾಡಿ
ಸುಮಾರು 14 ತಿಂಗಳ ನಂತರ ದಿನಾಂಕ 22-08-2024ರಂದು ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಇಲಾಖೆಯು ಕರ್ನಾಟಕ ಪ್ರದೇಶ ಕುರುಬ ಸಂಘ ಕಲ್ಬುರ್ಗಿ ಜಿಲ್ಲಾ ಶಾಖೆಯ ಹೆಸರಿಗೆ ಮಂಜುರಾತಿಗೆ ಸಂಪುಟ ಸಭೆಯಲ್ಲಿ ಅನುಮತಿ ನೀಡಿದಕ್ಕೆ ಸರಕಾರದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ,ಸಚಿವ ಪ್ರಿಯಾಂಕ ಖರ್ಗೆ, ಸಂಸಧ ಕೆಎಂ ರಾಮಚಂದ್ರಪ್ಪ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಮತ್ತು ಸರ್ವ ಸಚಿವರಿಗೆ ಕಲಬುರ್ಗಿ ಜಿಲ್ಲೆ ಕುರುಬರ ಸಂಘದ ಅಧ್ಯಕ್ಷ ಗುರುನಾಥ ಎಸ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸಿ ಮುಡುಬೂಳ, ಕಾರ್ಯಧ್ಯಕ್ಷ ಸಾಯಿಬಣ್ಣ ಪೂಜಾರಿ ಮಲ್ಲಾಬಾದ್, ಕೋಶಾಧ್ಯಕ್ಷ ರವಿಗೊಂಡ ಕಟ್ಟಿಮನಿ,ಶಕರ್ನಾಟಕ ಪ್ರದೇಶ ಕುರುಬರ ಸಂಘ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕುರುಬರ ಸಮುದಾಯದ ಹಿರಿಯ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ ಖರ್ಗೆ, ಸಂಸದ ಕೆಎಂ ರಾಮಚಂದ್ರಪ್ಪ ಮತ್ತು ರಾಜ್ಯ ಸರ್ಕಾರಕ್ಕೆ ಹಾಗೂ ಸರ್ವ ಸಚಿವರಿಗೆ ಮಲ್ಲಿಕಾರ್ಜುನ್ ಸಿ ಮುಡುಬೂಳ, ಅಭಿನಂದನೆ ತಿಳಿಸಿದ್ದಾರೆ.
ವರದಿ :ಅಯ್ಯಣ್ಣ ಮಾಸ್ಟರ್