Ad imageAd image

ಹುಬ್ಬಳ್ಳಿಯಲ್ಲಿ ಮೀಟರ್ ದಂಧೆಗೆ ಬೇಸತ್ತು ಗೃಹಿಣಿ ಆತ್ಮಹತ್ಯೆ

Bharath Vaibhav
ಹುಬ್ಬಳ್ಳಿಯಲ್ಲಿ ಮೀಟರ್ ದಂಧೆಗೆ ಬೇಸತ್ತು ಗೃಹಿಣಿ ಆತ್ಮಹತ್ಯೆ
WhatsApp Group Join Now
Telegram Group Join Now

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮೀಟರ್ ದಂಧೆಗೆ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಕೂಡಲೇ ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆತ್ಮಹತ್ಯೆಗೆ ಯತ್ನಿಸಿರುವ ಗ್ರಹಿಣಿಯನ್ನು ತಸ್ಲೀಮಾ ಬಾನು (55) ಎಂದು ತಿಳಿದುಬಂದಿದೆ.ಕಳೆದ ಒಂದು ವರ್ಷದ ಹಿಂದೆ ಫಾಮಿದ ಮತ್ತು ಇತರರಿಂದ ತಸ್ಲೀಮಾ ಬಾನು 3,60,000 ಸಾಲವನ್ನು ಪಡೆದಿದ್ದರು. ಈ ವೇಳೆ ಫಾಮೀದ್ ವಾರಕ್ಕೆ 35 ಸಾವಿರ ಬಡ್ಡಿ ಕಟ್ಟುವಂತೆ ಗಲಾಟೆ ಮಾಡಿದ್ದಾನೆ.

ಇದರಿಂದ ತಸ್ಲಿಮ ಬಾನು ಮೀಟರ್ ಬಡ್ಡಿಗೆ ಬೆಸತ್ತು, ಮನೆಯಲ್ಲಿ ನೇಣು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ತಕ್ಷಣ ಸ್ಥಳೀಯರು ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ಮುಂದುವರೆದಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!