Ad imageAd image

ಸವಣೂರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧ ಆಯ್ಕೆ

Bharath Vaibhav
ಸವಣೂರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧ ಆಯ್ಕೆ
WhatsApp Group Join Now
Telegram Group Join Now

ಹಾವೇರಿ: ಜಿಲ್ಲೆ ಸವಣೂರು ತಾಲೂಕಿನ ಸವಣೂರ ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ 11 ಸದಸ್ಯರು ಉಪಸ್ಥಿತಿಯಲ್ಲಿದ್ದು ಮತ್ತು ಉಪಾಧ್ಯಕ್ಷ ಚುನಾವಣೆಗೆ 11 ಸದಸ್ಯರು ಉಪಸ್ಥಿತಿಯಲ್ಲಿದ್ದು ಅ ವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಾದರು.

ಚುನಾವಣೆ ಅಧಿಕಾರಿಗಳಾಗಿ ಸವಣೂರ ದಂಡಾಧಿಕಾರಿಗಳಾದ ಕೆಎನ್ ಭರತ್ ರಾಜ್ ಯವರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಿತು ಚುನಾವಣೆ ಪ್ರಕ್ರಿಯೆ ನಾಮಪತ್ರಗಳನ್ನು ಹಿಂಪಡೆಯಲು ಸಮಯ ಅವಕಾಶ ನೀಡಿದಾಗ ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ನಾಮಪತ್ರಗಳನ್ನು ಹಿಂ ಪಡೆದುಕೊಂಡಿರುವುದಿಲ್ಲ.

ಆದರಿಂದ ಕರ್ನಾಟಕ ಪುರಸಭೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಿಯಮ 1964 ಹಾಗೂ ಕರ್ನಾಟಕ ಪುರಸಭೆಗಳ ನಿಯಮ 1995 ರ ನಿಯಮ 8 (2) ರ ಪ್ರಕಾರ ಚುನಾವಣಾ ಕಣದಲ್ಲಿ ಅಭ್ಯರ್ಥಿಗಿಂತ ಹೆಚ್ಚಿನ ಸಂಖ್ಯೆ ಅಭ್ಯರ್ಥಿಗಳು ಭಾಗವಹಿಸದೆ ಇರುವುದರಿಂದ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಲಾಯಿತು ಎಂದು ದಂಡಾಧಿಕಾರಿಗಳಾದ ಕೆಎನ್ ಭರತ್ ರಾಜ್ ಅವರು ತಿಳಿಸಿದರು.

ಸವಣೂರ ಪುರಸಭೆ ಒಟ್ಟು 27 ಸದಸ್ಯರು ಇದ್ದು ಇದರಲ್ಲಿ ಹಾಜರಿದ್ದ 11 ಸದಸ್ಯರು ಇದ್ದು ಅಧ್ಯಕ್ಷರ ಸ್ಥಾನಕ್ಕೆ ಕೇವಲ ಒಂದು ನಾಮಪತ್ರ ಮಾತ್ರ ಸಲ್ಲಿಸಿದ್ದ ಶ್ರೀ ಅಲ್ಲವದ್ದೀನ್ ಹಸನ್ ಮಿಯಾ ಮನಿಯಾರ ಇವರು ಅವಿರೋಧವಾಗಿ ಕರ್ನಾಟಕ ಪುರಸಭೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣಾ ನಿಯಮ 1964 ಹಾಗೂ ಕರ್ನಾಟಕ ಪುರಸಭೆಗಳ ನಿಯಮ 1995 ರ ನಿಯಮ 8(5) ರ ಪ್ರಕಾರ ಶ್ರೀ ಅಲ್ಲಾವದ್ದಿನ್ ಹಸನ್ಮಿಯ ಮನಿಯರ್ ಇವರು ಪುರಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಂದು ಅಧಿಕೃತವಾಗಿ ಘೋಷಿಸಲಾಯಿತು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಖಮರುನ್ನೀಸಾ ಮೌಲಾಲಿ ಪಟೇಲ್ ಇವರಿಗೆ ಸವಣೂರು ಪುರಸಭೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಯಿತು.

ಸವಣೂರ ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅಲ್ಲಾವದ್ದಿನ್ ಮನಿಯಾರ ಯವರು ಮೂರು ಸಲ ಸದಸ್ಯರಾಗಿ ಆಯ್ಕೆಯಾಗಿದ್ದು, 2007ರಲ್ಲಿ ಸ್ಥಾಯಿ ಸಮಿತಿ ಚೇರ್ಮನಿಯಾಗಿದ್ದರು ನಂತರ 2013ರಲ್ಲಿ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆಯಾಗಿದ್ದರು ಹಾಗೂ 2024ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ವಿಶೇಷತೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ನಾನು ಈ ಅಧ್ಯಕ್ಷ ಸ್ಥಾನ ಪಡಿಯಬೇಕೆಂದರೆ ಇದರಲ್ಲಿ ವಿಶೇಷ ಪಾತ್ರ ನಮ್ಮ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಸಂಜೀವ ನೀರಲಗಿ, ಹಾಗೂ ಸವಣೂರ ಶಿಗ್ಗಾವ್ ಕ್ಷೇತ್ರದ ಮುಖಂಡರಾದ ಯಾಸಿರ್ ಅಹಮದ್ ಖಾನ್ ಪಠಾನ್,
ಸದಸ್ಯರಾದ ಪೀರ್ ಅಹಮದ್ ಗವಾರಿ ಅಶೋಕ್ ಮನಂಗಿ ಫಜಲ್ ಅಹಮದ್ ಖಾನ್ ಪಠಾಣ್ ಮತ್ತು ವಿಶೇಷ ನೂತನವಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಶ್ರೀಮತಿ ಖಮರುನ್ನಿಸಾ ಪಟೇಲ್ ಯವರು ಬೆಂಬಲವನ್ನು ನೀಡಿ ಉಪಾಧ್ಯಕ್ಷ ಸ್ಥಾನ ಪಡೆದಕೊಳ್ಳುವುದರಲ್ಲಿ ಯಶಸ್ವಿಗೊಂಡರು.

ಈ ಸಂದರ್ಭದಲ್ಲಿ ದಂಡಾಧಿಕಾರಿಗಳಾದ ಕೆಎನ್ ಭರತ್ ರಾಜ್ ಯವರು, ಪುರಸಭೆ ಮುಖ್ಯ ಅಧಿಕಾರಿಗಳಾದ ನೀಲಪ್ಪ ಎಂ ಹಾದಿಮನಿ, ಸಂಸ್ಥಾಪಕರಾದ ಎಂ ಬಿ ದೊಡ್ಡಣ್ಣವರ್ ಪುರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ಪಕ್ಷದ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು.

ವರದಿ: ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!