Ad imageAd image

ಆಚಾರ್ಯ ವಿದ್ಯಾಸಾಗರ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ ಕಾರ್ಯಕ್ರಮ

Bharath Vaibhav
ಆಚಾರ್ಯ ವಿದ್ಯಾಸಾಗರ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ ಕಾರ್ಯಕ್ರಮ
WhatsApp Group Join Now
Telegram Group Join Now

ಚಿಕ್ಕೋಡಿ :

ಚಿಕ್ಕೋಡಿ ಆಚಾರ್ಯ ವಿದ್ಯಾಸಾಗರ ಸೌಹಾರ್ದ ಸಹಕಾರಿ ಸಂಘ ನಿ. ಸದಲಗಾ, ಇವರ 3 ನೇಯ ಶಾಖೆಯನ್ನು ಚಿಕ್ಕೋಡಿ ಪಟ್ಟಣದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಸಂಪಾದನ ಚರಮೂರ್ತಿ ಮಠದ, ಮಠಾಧೀಶರಾದ ಸಂಪಾದನಾ ಮಹಾಸ್ವಾಮೀಜಿ ಇವರ ಹಾಗೂ ಗಣ್ಯ ಮಾನ್ಯರ ಅಮೃತ ಹಸ್ತದಿಂದ ದೀಪ ಪ್ರಜ್ವಲನೆ ಮೂಲಕ ಶಾಖೆಯು ಉದ್ಘಾಟನೆ ಮಾಡಲಾಯಿತು.

ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ಪದಾಧಿಕಾರಿಗಳು ಆದ ಜಗದೀಶ ಕವಟಗಿಮಠ ಮಾತನಾಡಿ, ಸಂಸ್ಥೆ ಯಶಸ್ಸನ್ನು ಕಾಣಬೇಕಾದರೆ ಯೋಗ್ಯ ಜನರಿಗೆ ಮಾತ್ರ ಸಾಲ ನೀಡಬೇಕು, ಪಿಗ್ಮೀ ಠೇವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸಬೇಕು, ಸಿಬ್ಬಂದಿಗಳ ಕ್ಷೇಮದ ಬಗ್ಗೆಯೂ ವಿಚಾರ ಮಾಡಬೇಕು, ಕನಿಷ್ಟ ಶೇ 10 ರ ಪ್ರತಿಶತ ಮುಳಗುವ ಸಾಲ ನಿಧಿಯನ್ನು ಕೂಡು ಹಾಕಬೇಕೆಂದು ಹೇಳಿದರು, ಮುಖ್ಯ ಅತಿಥಿಗಳಾದ ಆನಂದ ಆರ್ವಾರೆ ಮಾತನಾಡಿ ಸಹಕಾರ ರಂಗದಿಂದ ಜನರಿಗೆ ತುಂಬಾ ಅನುಕೂಲವಾಗಿದೆ, ಸಾರ್ವಜನಿಕರು ಸಂಸ್ಥೆಯ ಯೋಜನೆಗಳ ಸದುಪಯೋಗ ಮಾಡಿಕೊಂಡು ಪ್ರಗತಿಯನ್ನು ಹೊಂದಬೇಕೆಂದು ಎಂದು ಹೇಳಿದರು.

ಶ್ರೀ ಸಂಪಾದನಾ ಮಹಾಸ್ವಾಮೀಜಿ ಇವರು ಆಶೀರ್ವಚನದ ಮೂಲಕ ಸಂಸ್ಥೆಯು ಬ್ರಹತ್ತ ಆಕಾರವಾಗಿ ಬೆಳೆಯಲಿ, ರೈತರಿಗೆ ಹಾಗೂ ಜನಸಾಮಾನ್ಯರಿಗೆ ಈ ಸಂಸ್ಥೆಯಿಂದ ಸಹಾಯ ದೊರೆಯಲಿ ಎಂದು ಹೇಳಿ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆಶೀರ್ವಾದ ನೀಡಿದರು, ಚಿಕ್ಕೋಡಿ ಶಾಖೆಗೆ ಮೊದಲನೇ ದಿನವಾದ ಇಂದು 1.5 ಕೋಟಿಗಿಂತಲೂ ಹೆಚ್ಚು ಠೇವಣಿಸಂಘ್ರಹವಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಆದಪ್ಪಾ ಗಿಜುನೆ, ಅಧ್ಯಕ್ಷರಾದ ದೇವೇಂದ್ರ ಗಿಜುನೆ, ಉಪಾಧ್ಯಕ್ಷರಾದ ಪ್ರದೀಪ ಇಂಗಳೆ, ಮುಖ್ಯ ಕಚೇರಿ ಸದಸ್ಯರು, ಶಾಖಾ ಅಧ್ಯಕ್ಷರಾದ ಅಲಗೌಡಾ ಪಾಟೀಲ,ಉಪಾಧ್ಯಕ್ಷರಾದ ಪ್ರಕಾಶ ಹುಜ್ಜಕ್ಕೆ, ಶಾಖಾ ಸದಸ್ಯರು, ಸದಲಗಾ ಪುರಸಭೆ ಅಧ್ಯಕ್ಷ ಅಭಿಜೀತ ಪಾಟೀಲ, ಅನೀಲ ಮಾನೆ, ಶಂಕರಗೌಡ ಪಾಟೀಲ, ದರೆಪ್ಪಾ ಹವಾಲ್ದಾರ, ಸುಕುಮಾರ ಗಿಜುನೆ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಮಹಾದೇವ ಪಾಟೀಲ, ಸಚಿನ ಪಾಟೀಲ, ಬಾಳಗೌಡಾ ಪಾಟೀಲ, ಭರತ ಬದನಿಕಾಯಿ, ಸಂತೋಷ ನವಲೆ, ಹೇಮಂತ ಶಿಂಗೆ, ರಾಜು ಸೋಮನ್ನವರ, ಸಂಜೀವ ಕೇಸ್ತಿ, ಪ್ರಕಾಶ ಕರೆಪ್ಪಗೋಳ, ಲಕ್ಷ್ಮಿಕಾಂತ ಹಾಲಪ್ಪನವರ, ಚಿದಾನಂದ ಸಮಗಾರ ಹಾಗೂ ನೂರಾರು ಸಂಖ್ಯೆಯಲ್ಲಿ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ವರದಿ : ರಾಜೀವ್ ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!