ಚಡಚಣ:-ಕರ್ನಾಟಕ ರಾಜ್ಯದ ಕಟಬು ಕಟಬರ ಅಲಮಾರಿ ಜನಾಂಗದ ಜನಜಾಗೃತಿ ಸಮಾವೇಶ ಸಪ್ಟಂಬರ 1,2024, ರವಿವಾರ ರಂದು ವಿಜಯಪುರ ಜಿಲ್ಲೆಯ ಜಾಗೃತ ಸಮಾವೇಶ ಇಂಡಿ ಪಟ್ಟಣದಲ್ಲಿ ಶಂಕರ ಪಾರ್ವತಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಎಂದು ಚಡಚಣ ತಾಲೂಕ ಅಧ್ಯಕ್ಷರು ದತ್ತು ಶಿಂದೆ ಪತ್ರಿಕಾಗೋಷ್ಠಿ ಯಲ್ಲಿ ಈ ಮಾಹಿತಿ ತಿಳಿಸಿದರು ಮತ್ತು ಸಮಾಜ ಸಂಘಟನೆ ಉದ್ದೇಶದಿಂದ ನಮ್ಮ ಜನರಿಗೆ ಸರ್ಕಾರದ ಯಾವುದೇ ಸೌಲತ್ತುಗಳು ನೀಡಿಲ್ಲ ಇದರಿಂದ ನಾವು ಹಿಂದುಳಿದ ಜನಾಂಗ ಕಟಬು ಕಟಬರ ಸರ್ಕಾರದ ಕೆಲಸದಿಂದ ವಂಚಿತರಾಗಿದ್ದೇವೆ.
ಈ ಕಾರ್ಯಕ್ರಮ ಯೋಜನೆಗಳು 10ನೇ ತರಗತಿ 80% ಹೆಚ್ಚು ಅಂಕ ತಗೊಂಡಿದ್ದಾರೆ ಸನ್ಮಾನ, ಮತ್ತು ಪಿಯುಸಿಯಲ್ಲಿ 80% ಗಿಂತ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ, ಮಾಜಿ ಸೈನಿಕರಿಗೆ ಮತ್ತು ಸೈನ್ಯದಲ್ಲಿ ಮೃತರಾದ ಅವರ ಹೆಂಡತಿಯರಿಗೆ ಸನ್ಮಾನ, ಯಾವುದೇ ಸರ್ಕಾರ ಕೆಲಸದಲ್ಲಿ ನಿವೃತ್ತಿ ಹೊಂದಿದವರನ್ನು ಕೂಡ ಗೌರವಾನ್ವಿತ ಸನ್ಮಾನ ಮಾಡಲಾತದೆ ಎಂದು ಕಟಬು ಕಟಬರ ತಾಲೂಕ ಅಧ್ಯಕ್ಷ ದತ್ತು ಶಿಂಧೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಕಟಬು ಕಟಬರ ರಾಜ್ಯ ಅಧ್ಯಕ್ಷರಾದ ಜಗದೀಶ ಕ್ಷತ್ರಿ,ಜಿಲ್ಲಾ ಕಟಬು ಕಟಬರ ಅಧ್ಯಕ್ಷರು ಶಿವಮೂರ್ತಿ ಕಾಟಕರ,ಮತ್ತು ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲ ಮತ್ತು ಮಾಜಿ ಶಾಸಕರಾದ ರಮೇಶ ಭೂಸನೂರ, ಸಿಂದಗಿ ಮತ್ತು ಆಲಮೆಲ ತಾಲೂಕ ಕಟಬು ಕಟಬರ ಅಧ್ಯಕ್ಷರಾದ ಸಂತೋಷ ಇ ಕ್ಷತ್ರಿ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ,ಸಮಾಜ ನಾಯಕರು ಗಣ್ಯರು ಬರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಸಮಾರಂಭಕ್ಕೆ ನಮ್ಮ ಸಮುದಾಯದ ಇನ್ನು ಮುಂದಾದರೂ ಸರಕಾರದ ಏನಾದರೂ ಅನುದಾನ ಸಿಗಲಿ ಎಂದು ತಾಲೂಕ ಅಧ್ಯಕ್ಷರು ದತ್ತು ಶಿಂದೆ ಸರ್ಕಾರದ ಗಮನಕ್ಕೆ ಬರಲೆಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ವ್ಯಾಪಾರಸ್ಥರಾದ ಹನುಮಂತ ನಾ ಕ್ಷತ್ರಿ, ಪತ್ರಕರ್ತರಾದ ಪ್ರಕಾಶ ಕ್ಷತ್ರಿ, ರವಿ ಶಾ ಶಿಂಧೆ, ಭೀಮಶಂಕರ ಶಾ ಶಿಂದೆ, ಮಹೇಶ ಶಿಂದೆ,ಪಿಂಟು ಶಾ ಸಿಂಧೆ, ತಾಲೂಕ ಕರವೇ ಅಧ್ಯಕ್ಷ ಸುನಿಲ ಕ್ಷತ್ರಿ, ಅರ್ಜುನ್ ಬಿ ಕ್ಷತ್ರಿ,ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕುಬೇರ ಶಿಂಧೆ, ಸಮಾಜದ ಪ್ರಮುಖರಾದ ಸುಭಾಷ ಶಿಂಧೆ, ಸುನಿಲ ನಾಗಪ್ಪ ಕ್ಷತ್ರಿ,ಈ ಎಲ್ಲ ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಸಭೆಯಲ್ಲಿ ಉಪಸ್ಥಿದ್ದರು.
ವರದಿ :-ಉಮಾಶಂಕರ ಕ್ಷತ್ರಿಯ