ಚಿಟ್ಟಗುಪ್ಪ:- ಬೆಳಕೇರಾ ಗ್ರಾಮ ಪಂಚಾಯತನಲ್ಲಿ ದಿನಾಂಕ:27-08-2024 ರಂದು ಸರಕಾರದ ನೀತಿ ಆಯೋಗದ ಯೋಜನೆ ಅಡಿಯಲ್ಲಿ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮಕ್ಕೆ ಪ್ರತಿಜ್ಞೆ ಮಾಡುವ ಮೂಲಕ ಚಾಲನೆ ನೀಡಲಾಯಿತು.ಕಾರ್ಯಕ್ರಮ ಕುರಿತು ಚಿಟಗುಪ್ಪ ತಾಲೂಕು ಪಂಚಾಯತ ನೀತಿ ಆಯೋಗ ಸಂಯೋಜಕರಾದ ಸಂತೋಷ್ ಮುಸ್ತರಿ ಮಾತನಾಡಿ,ಗರ್ಭಿಣಿ ಮಹಿಳೆಯರ ತಪಾಸಣೆ ಮಾಡುವುದು,ರಕ್ತ ಪರೀಕ್ಷೆ ಮಾಡುವುದು,ಸಕ್ಕರೆ ಕಾಯಿಲೆ ಮತ್ತು ಅಧಿಕ ಒತ್ತಡದ,ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಕೊಳ್ಳುವುದು ಮುಂತಾದ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಸಂಜು ಕುಮಾರ,ಗ್ರಾಮ ಪಂಚಾಯತ ಸದಸ್ಯ ವೆಂಕಟ್ ರೆಡ್ಡಿ ಬನ್ನಳ್ಳಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು,ಆಶಾ ಕಾರ್ಯಕರ್ತರು,ಗರ್ಭಿಣಿ ಮಹಿಳೆಯರು,ಸಿಎಚ್ಒಎಸ್,ಪಿಎಚ್ಒಎಸ್,ಸ್ವ-ಸಹಾಯ ಸಂಘ ಸದ್ಯಸರು,ಊರಿನ ಮುಖಂಡರು,ಮಹಿಳೆಯರು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇದ್ದರು.ಕಾರ್ಯಕ್ರಮ ಮುಕ್ತಾಯದ ಬಳಿಕ ಗರ್ಭಿಣಿ ಮಹಿಳೆಯರಿಗೆ ತಪಾಸಣೆ ಮಾಡಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ವರದಿ:-ಸಜೀಶ