Ad imageAd image

ಭದ್ರತಾಪಡೆ ಸಿಬ್ಬಂದಿ – ನಕ್ಸಲ ನಡುವಿನ ಕಾಳಗ :  ಮೂವರು ಮಹಿಳಾ ನಕ್ಸಲರ ಹತ್ಯೆ 

Bharath Vaibhav
ಭದ್ರತಾಪಡೆ ಸಿಬ್ಬಂದಿ – ನಕ್ಸಲ ನಡುವಿನ ಕಾಳಗ :  ಮೂವರು ಮಹಿಳಾ ನಕ್ಸಲರ ಹತ್ಯೆ 
WhatsApp Group Join Now
Telegram Group Join Now

ರಾಯ್ಪುರ: ಛತ್ತೀಸ್ ಗಢದಲ್ಲಿ ಭದ್ರತಾಪಡೆ ಸಿಬ್ಬಂದಿ ಹಾಗೂ ನಕ್ಸಲ ನಡುವಿನ ಕಾಳಗದಲ್ಲಿ ಮೂವರು ಮಹಿಳಾ ನಕ್ಸಲರನ್ನು ಸದೆಬಡಿಯುವಲ್ಲಿ ಭದ್ರತಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಕಾರ್ಯಾಚಾರಣೆಯಲ್ಲಿ ಭದ್ರತಾ ಸಿಬ್ಬಂದಿ ಮೂವರು ಮಹಿಳಾ ನಕ್ಸಲರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.

ನಾರಾಯಣಪುರ ಹಾಗೂ ಕಾಂಕೇರ್ ಜಿಲ್ಲೆಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ ಎನ್ ಕೌಂಟರ್ ನಡೆದಿದ್ದು, ಈ ವೇಳೆ ಮೂವರು ನಕ್ಸಲರನ್ನು ಸದೆಬಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್ ಸಮವಸ್ತ್ರದಲ್ಲಿದ್ದ ಮೂವರು ಮಹಿಳೆಯರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಹಾಗೂ ನಕ್ಸಲ ನಡುವಿನ ಸಮರದಲ್ಲಿ ಪೊಲೀಸ್ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ.

ನಕ್ಸಲರ ಬಳಿ ಇದ್ದ ಭಾರಿ ಪ್ರಮಾಣದ ಸಿಡಿಮದ್ದು ಗುಂಡುಗಳು, ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನಷ್ಟು ನಕ್ಸಲರು ಈ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ಇದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಈ ವರ್ಷ ಛತ್ತೀಸ್ ಗಢದಲ್ಲಿ ನಡೆದ ವಿವಿಧ ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ 145 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!