Ad imageAd image

ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ವತಿಯಿಂದ ಸಂಚಾರ

Bharath Vaibhav
ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ವತಿಯಿಂದ ಸಂಚಾರ
WhatsApp Group Join Now
Telegram Group Join Now

ಹುಬ್ಬಳ್ಳಿ;-ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ವತಿಯಿಂದ ಸಂಚಾರ ಸುರಕ್ಷೆ, ಸುರಕ್ಷಿತ ಭಾರತ, ಜನ ಜಾಗೃತಿ ಅಭಿಯಾನದ ಆಯೋಜನೆಯನ್ನು ಇಂದಿನಿಂದ ಸೆಪ್ಟೆಂಬರ್ ೧ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರಿ ದಿವ್ಯಪ್ರಭಾ ಹೇಳಿದರು.‌

ನಗರದಲ್ಲಿಂದು ಮಾತನಾಡಿದ ಅವರು, ನಗರದ ಭೈರಿದೇವರಕೊಪ್ಪ-ಗಾಮನಗಟ್ಟಿ ರಸ್ತೆಯಲ್ಲಿರುವ ಏಷ್ಯಾದಲ್ಲಿಯೇ ಬೃಹತ್ ಭಗವದ್ಗೀತಾ ಜ್ಞಾನಲೋಕಾ ಆರ್ಟ್ ಗ್ಯಾಲರಿಯ ಪ್ರಾಂಗಣದಲ್ಲಿ ಇಂದು ಶುಕ್ರವಾರದಂದು ಸಂಜೆ ೫.೩೦ ಕ್ಕೆ ಹಮ್ಮಿಕೊಳ್ಳಲಾಗಿದೆ.

ಉದ್ಘಾಟನಾ ಸಮಾರಂಭದ ನಂತರ ರಸ್ತೆ ಸುರಕ್ಷಾ ಜಾಗೃತಿಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಹಾನಗರ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಆಟೋಮೊಬೈಲ್ ಶೋರೂಮ್ ಗಳು, ಮೆಡಿಕಲ್ ಕಾಲೇಜ್, ಪಾಲಿಟೆಕ್ನಿಕ್ ಕಾಲೇಜ್, ಗರ್ಲ್ಸ್ ಕಾಲೇಜ್, ಲಾ ಕಾಲೇಜ್ ವಿವಿಧೆಡೆ ಏರ್ಪಡಿಸಲಾಗುವುದು ಎಂದರು.
ಈ ಸಮಾರಂಭದಲ್ಲಿ ಬ್ರಹ್ಮಕುಮಾರೀಸ್ ಆರ್‌ಇಆರ್ ಎಫ್ ನ ಸಂಚಾರ ಮತ್ತು ಸಾರಿಗೆ ವಿಭಾಗದ ಚೇರ್ ಪರ್ಸನ್ ರಾಜಯೋಗಿನಿ ಬ್ರಹ್ಮಕುಮಾರಿ ದಿವ್ಯಪ್ರಭಾ, ವೈಸ್ ಚೇರ್ ಪರ್ಸನ್ ಮತ್ತು ರಸ್ತೆ ಸುರಕ್ಣಾ ಟ್ರೇನರ್ ಬ್ರಹ್ಮಕುಮಾರ ಡಾ‌. ಸುರೇಶ ಶರ್ಮಾ, ರಾಷ್ಟ್ರೀಯ ಸಂಯೋಜಕಿ ಬ್ರಹ್ಮಕುಮಾರಿ ಕವಿತಾ ಇತರರು ಉಪನ್ಯಾಸಕರಾಗಿ ಪಾಲ್ಗೊಳ್ಳಲಿದ್ದಾರೆಂದರು‌.
ಡಾ. ಬ್ರಹ್ಮಕುಮಾರ ಬಸವರಾಜ ರಾಜೃಷಿಜಿ, ಡೈರಕ್ಟರ್ ಬ್ರಹ್ಮಕುಮಾರೀಸ್, ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾ ದೀದೀಜಿ ಉಪಸ್ಥಿತರಿರಲಿದ್ದಾರೆಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕುಮಾರಿ ನಿರ್ಮಲಾದೇವಿ, ಸುರೇಶ ಶರ್ಮಾ, ಬ್ರಹ್ಮಕುಮಾರೀಸ್ ಶಾಂತಕ್ಕ, ಸಂಗೀತಕ್ಕ ಉಪಸ್ಥಿತರಿದ್ದರು.

ವರದಿ :- ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!