Ad imageAd image

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ : 3 ಸರ್ಕಾರಿ ನೌಕರರು ಸೇರಿ 48 ಮಂದಿ ಅರೆಸ್ಟ್ 

Bharath Vaibhav
ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ : 3 ಸರ್ಕಾರಿ ನೌಕರರು ಸೇರಿ 48 ಮಂದಿ ಅರೆಸ್ಟ್ 
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, 3 ಸರ್ಕಾರಿ ನೌಕರರು ಸೇರಿ 48 ಮಂದಿಯನ್ನು ಬಂಧಿಸಿದ್ದಾರೆ.

ನೀರಾವರಿ ಇಲಾಖೆ ಹುದ್ದೆ ಹಗರಣಕ್ಕೆ ಸಂಬಂಧಿಸಿದಂತೆ 3 ಸರ್ಕಾರಿ ನೌಕರರು ಸೇರಿ 48 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ನಕಲಿ ದಾಖಲೆ ನೀಡಿ ಉದ್ಯೋಗ ಗಿಟ್ಟಿಸಲು ಮುಂದಾದ 37 ಮಂದಿ ಸೇರು ಮೂವರು ಸರ್ಕಾರಿ ನೌಕರರು, 11 ಮಂದಿ ಬ್ರೋಕರ್ ಗಳು ಸೇರಿ 48 ಮಂದಿ ಅಂದರ್ ಆಗಿದ್ದಾರೆ.

ಜಲಸಂಪನ್ಮೂಲ ಇಲಾಖೆಯ 182 ಎಸ್ ಡಿ ಎ ಬ್ಯಾಗ್ ಲಾಗ್ ಹುದ್ದೆ ಭರ್ತಿಗೆ 2022 ರಲ್ಲಿ ಅರ್ಜಿ ಆಹ್ವಾನಿಸಿತ್ತು, ನೇರ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸ್ವೀಕಾರ ಮಾಡಿದ್ದು, ಗರಿಷ್ಟ ಅಂಕ ಪಡೆದವರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿತ್ತು . ಅರ್ಜಿ ಪರಿಶೀಲನೆ ವೇಳೆ 62 ಅಭ್ಯರ್ಥಿಗಳ ಅಂಕಪಟ್ಟಿ ನಕಲಿಯಾಗಿರುವುದು ಪತ್ತೆಯಾಗಿದೆ.

ನಂತರ ಸಿಸಿಬಿ ತನಿಖೆ ಕೈಗೆತ್ತಿಕೊಂಡು 48 ಮಂದಿಯನ್ನು ಸೆರೆ ಹಿಡಿದಿದೆ. ಹಾಗೂ ಇನ್ನೂ 31 ಜನರ ಬಂಧನಕ್ಕೆ ಬಲೆ ಬೀಸಿದೆ. ಕಲಬುರ್ಗಿ ಜಿಲ್ಲೆ ಮುರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲ ಆನಂದ್, ಜೋಗ ಫಾಲ್ಸ್ ಕೆಪಿಟಿಸಿಎಲ್ ಕಚೇರಿ ಪ್ರಥಮ ದರ್ಜೆ ಸಹಾಯಕ ಕೃಷ್ಣ, ಹಾಸನ ಜಲಸಂಪನ್ಮೂಲ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪ್ರದೀಪ್ ಬಂಧಿತ ಸರ್ಕಾರಿ ನೌಕರರಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!