ದಾವಣಗೆರೆ : ಬಿಜೆಪಿ ಜೆಡಿಎಸ್ ಸೇರಿಕೊಂಡು ಕಾಂಗ್ರೆಸ್ ಸರ್ಕಾರ ಬೀಳಿಸಲು ಹುನ್ನಾರ ನಡೆಸುತ್ತಿವೆ ಎಂಬ ಆರೋಪಕ್ಕೆ, ಬಿಜೆಪಿಯ ಮಾಜಿ ಶಾಸಕ ಬಿಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನಮಗೆ ಸರ್ಕಾರ ಬಿಳಿಸುವ ಅವಶ್ಯಕತೆ ಇಲ್ಲ ನಾವು ಇನ್ನೂ ಮೂರು ವರ್ಷ ಬೇಕಾದರೂ ಕಾಯುತ್ತೇವೆ ಎಂದು ಅವರು ತಿಳಿಸಿದರು.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದಅವರು, ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅದನ್ನು ಕೂಡ ಕೊಡುತ್ತಿಲ್ಲ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಏನು ಅಭಿವೃದ್ಧಿ ಮಾಡಿಲ್ಲ.
ತಮ್ಮ ಹಗರಣವನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ. ನಾಳೆ ಹೈಕೋರ್ಟ್ ನಲ್ಲಿ ಮುಡಾ ಹಗರಣದ ತೀರ್ಪು ಬರುತ್ತದೆ. 136 ಸ್ಥಾನಗಳಿರುವ ಸರ್ಕಾರವನ್ನು ಕೆಡವಲು ಸಾಧ್ಯ ಇದೆಯಾ? ಸುಮ್ಮನೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಸರ್ಕಾರ ಬೀಳಿಸುವ ಅವಶ್ಯಕತೆ ಇಲ್ಲ. ಇನ್ನೂ ಮೂರು ವರ್ಷ ಕಾಯುತ್ತೇವೆ. ಇವರೇ ಸರ್ಕಾರ ಬಿಳಿಸಿಕೊಂಡಾಗ ಜನರ ಮುಂದೆ ಹೋಗುತ್ತೇವೆ.ಅದನ್ನು ಬಿಟ್ಟು ಈ ಕಿಚಡಿ ಸರ್ಕಾರವನ್ನು ಕೆಡವಲು ಹೋಗುವುದಿಲ್ಲ.
ಸರ್ಕಾರ ಮಾಡಬೇಕಾದರೆ 90 ಶಾಸಕರು ಹೊರಬೇರಬೇಕು ಅದು ಸಾಧ್ಯಾನ? ಜನರ ಗಮನ ಬೇರೆಡೆ ಸೆಳೆಯಲು ಹೇಳಿಕೊಂಡು ಹೋಗುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದರು.
ಇನ್ನು ರಾಜ್ಯ ಸರ್ಕಾರಕ್ಕೆ ಕೋವಿಡ್ ಹಗರಣದ ವರದಿ ಸಲ್ಲಿಕೆಯ ವಿಚಾರವಾಗಿ ಒಂದು ವರ್ಷ ಮೂರು ತಿಂಗಳು ಬಳಿಕ ಬಿಜೆಪಿ ಹಗರಣದ ಬಗ್ಗೆ ಮಾತನಾಡುತ್ತಾರೆ.
ಹಾಗಾದರೆ ಇಷ್ಟು ದಿನ ಏನು ಮಾಡ್ತಾ ಇದ್ದರು? ಎಂದು ಬಿಸಿ ಪಾಟೀಲ್ ಪ್ರಶ್ನಿಸಿದರು. ನೀವು ವಿರೋಧ ಪಕ್ಷದಲ್ಲಿದ್ದರೂ ಆಗ ಯಾಕೆ ಸುಮ್ಮನೆ ಇದ್ರಿ ನಿಮಗೆ ಏನಾದರೂ ಪಾಲು ಇದೆಯಾ ಎಂಬ ಅನುಮಾನ ಕಾಡುತ್ತಿದೆ.
ಆಗ ಸುಮ್ಮನೆ ಕೂತುಕೊಂಡು ಈಗ ಮಾತನಾಡಿದರೆ ಹೇಗೆ? ಕೋವಿಡ್ ಹಗರಣದ ವರದಿ ಕೈ ಸೇರಿದೆ ಎಂದು ಹೇಳುತ್ತಿದ್ದೀರಿ. ಅದನ್ನು ಬಿಚ್ಚಿಡುತ್ತಿರುವ ಹೊರಗೆ ಇಡುತ್ತೀರೋ ಒಟ್ನಲ್ಲಿ ತನಿಖೆ ಮಾಡಿ ಕಾನೂನಿಗಿಂತ ಯಾರು ದೊಡ್ಡವರಲ್ಲ ತನಿಖೆ ಮಾಡಿ ತಪ್ಪಿಸ್ತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಎಂದು ದಾವಣಗೆರೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಬಿ ಸಿ ಪಾಟೀಲ್ ಹೇಳಿಕೆ ನೀಡಿದರು.