Ad imageAd image

ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಗದ್ದುಗೆ ಏರಲು ಕಾಂಗ್ರೆಸ್ ಕಸರತ್ತು

Bharath Vaibhav
ಪಟ್ಟಣ ಪಂಚಾಯತ್ ಅಧ್ಯಕ್ಷ,  ಉಪಾಧ್ಯಕ್ಷ ಚುನಾವಣೆಯ ಗದ್ದುಗೆ ಏರಲು ಕಾಂಗ್ರೆಸ್ ಕಸರತ್ತು
WhatsApp Group Join Now
Telegram Group Join Now

ಔರಾದ್ :-ಶತಾಯಗತಾಯ ಔರಾದ ಪಟ್ಟಣ ಪಂಚಾಯತ್ ಮೇಲೆ ಕಾಂಗ್ರೆಸ್ ಧ್ವಜ ಹಾರಿಸುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳುರ್ ತಿಳಿಸಿದ್ದಾರೆ.

ಬೀದರ್ ಜಿಲ್ಲೆ ಔರಾದ ಪಟ್ಟಣದ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ  ಸೆಪ್ಟೆಂಬರ್ 6 ರಂದು ನಿಗದಿಗೊಂಡಿದೆ.ಒಟ್ಟು 20 ಸದಸ್ಯರ ಸಂಖ್ಯೆ ಬಲ ಹೊಂದಿದ ಪಟ್ಟಣ ಪಂಚಾಯಿತಿಯಲ್ಲಿ 12 ಬಿಜೆಪಿ 6 ಕಾಂಗ್ರೆಸ್ 2 ಪಕ್ಷೇತರ ಅಭ್ಯರ್ಥಿಗಳು ಚುನಾಯಿತಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಚಿನ್ನೆಯಲ್ಲಿ ಗೆದ್ದು ಬಿಜೆಪಿ ಪಕ್ಷ ಸೇರಿದ ದೊಂಡಿಬಾ ನರೋಟೆ, ರಾಧಾಬಾಯಿ ನರೋಟೆ, ಗುಂಡಪ್ಪ ಮುದ್ದಾಳೆ.
ಈ ಮೂರು ಜನ ಸದಸ್ಯರು ಬಿಜೆಪಿ ಪಕ್ಷ ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಇವರು ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲು ನ್ಯಾಯಾಲಯದ ಮೆಟ್ಟಿಲೇರಿದೆ ನ್ಯಾಯಾಲಯದಲ್ಲಿ ಪ್ರಕರಣ ಕೂಡ ನಡೆಯುತ್ತಿದೆ ಎಂದು ಸುಧಾಕರ್ ತಿಳಿಸಿದಾರೆ.

ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದು ಪಕ್ಷವೇ ತನ್ನ ತಾಯಿ ಎಂದು ಪಕ್ಷ ಧರ್ಮ ನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಪ್ರಶಾಂತ್ ಪುಲಾರಿ, ಲಕ್ಷ್ಮಿಬಾಯಿ, ಸರುವಬಾಯಿ ಘುಳೆ, ಅವರ ಪಕ್ಷ ನಿಷ್ಠೆಗೆ ಪಕ್ಷ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ .
ಈ ಮೂರು ಜನ ಸದಸ್ಯರನ್ನು ಬಿಜೆಪಿ ಪಕ್ಷಕ್ಕೆ ಸೆಳೆಯಲು ಶಾಸಕ ಪ್ರಭು ಚೌಹಾಣ್ ಅವರು ಎಷ್ಟೇ ಒತ್ತಡ ಹಾಕಿದರು ಆಸೆ ಆಯುಷ್ಯಗಳು ಹುಟ್ಟಿದರು ಪಕ್ಷ ಬಿಟ್ಟು ಹೋಗದೆ ಪಕ್ಷದಲ್ಲಿಯೇ ಉಳಿದಿದ್ದರೆ
ಹಾಗಾಗಿ ಈ ಮೂರು ಜನ ಕಾಂಗ್ರೆಸ್ ಸದಸ್ಯರಿಗೆ ಎಲ್ಲಾ ರೀತಿಯ ಸಹಾಯ ಸಹಕಾರಕ್ಕೆ ಪಕ್ಷ ಜೊತೆಯಲ್ಲಿ ಇರುತ್ತದೆ ಎಂದು ಸುಧಾಕರ್ ಅವರು ತಿಳಿಸಿದರು.

ಔರಾದ ಬಿಜೆಪಿ ಪಕ್ಷದಲ್ಲಿ ಮನೆ ಒಂದು ಮೂರು ಬಾಗಿಲು ಎಂಬಂತೆ ಗುಂಪುಗಳಾಗಿವೆ,ಹಾಗಾಗಿ ಬಿಜೆಪಿ ಪಕ್ಷದ ಬಹುತೇಕ ಪಟ್ಟಣ ಪಂಚಾಯತ್ ಸದಸ್ಯರು ನಮ್ಮ ಸಂಪರ್ಕದಲ್ಲಿದ್ದು ಈ ಸಾರಿ ಪಟ್ಟಣ ಪಂಚಾಯಿತಿ ಮೇಲೆ ಕಾಂಗ್ರೆಸ್ ಧ್ವಜ ಹಾರಿಸುವುದು ನೂರಕ್ಕೆ ನೂರು ಖಚಿತ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಸಹ ಸಂಚಾಲಕ ಸುಧಾಕರ್ ಕೊಳ್ಳುರ ರವರು ತಿಳಿಸಿದ್ದಾರೆ.

  ವರದಿ:- ಔರಾದ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!