ಚಾಮರಾಜನಗರ : ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡಾನೆಗಳೆರಡು ರೈಲ್ವೆ ಬ್ಯಾರಿಕೇಟ್ ದಾಡುವಾಗ ಕಾಡಾನೆಯೊಂದು ಸಿಲುಕಿಕೊಂಡಿದ್ದು, ಅದನ್ನು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಯನ್ನು ರಕ್ಷಿಸಿದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಬಂಡಿಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮದ್ದೂರು ವಲಯ ವ್ಯಾಪ್ತಿಯ ರೈಲ್ವೆ ಬ್ಯಾರಿಕೇಡ್ ಅಡಿಯಲ್ಲಿ ಸಿಲುಕಿದ್ದ 45 ವರ್ಷದ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ.
ಎರಡು ಕಾಡಾನೆಗಳು ರೈಲ್ವೇ ಬ್ಯಾರಿಕೇಡ್ ದಾಟಿ ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನಿಗೆ ನುಗ್ಗಲು ಯತ್ನಿಸಿದ್ದವು. ಒಂದು ಆನೆಯು ಅಡೆತಡೆಯನ್ನು ಯಶಸ್ವಿಯಾಗಿ ದಾಟಿದರೆ, ಇನ್ನೊಂದು ರೈಲ್ವೇ ಬ್ಯಾರಿಕೇಡ್ ಅಡಿಯಲ್ಲಿ ತೆವಳಲು ಪ್ರಯತ್ನಿಸಿ, ಸಿಕ್ಕಿಕೊಂಡು ನರಳುತ್ತಿತ್ತು.
ಇದನ್ನು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು ರೇಲಿಂಗ್ನ ಒಂದು ಭಾಗವನ್ನು ಬಿಚ್ಚಿ ಸಡಿಲಗೊಳಿಸಿ ಬ್ಯಾರಿಕೇಟ್ ನಡಿ ಸಿಲುಕಿಕೊಂಡಿದ್ದ ಕಾಡಾನೆಯನ್ನು ಯಶಸ್ವಿಯಾಗಿ ರಕ್ಷಿಸಿದರು.
. ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಕ್ಷೇತ್ರ ನಿರ್ದೇಶಕ ಡಿಸಿಎಫ್ ಪ್ರಭಾಕರನ್ ಮಾತನಾಡಿ, ಕಾಡುಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ನಮ್ಮ ಅರಣ್ಯ ಕಾಲಾಳುಗಳನ್ನು ನಾವು ಪ್ರಶಂಸಿಸಲೇಬೇಕುವನ್ಯಜೀವಿಗಳನ್ನು ರಕ್ಷಿಸುವ ಮತ್ತು ಉಳಿಸುವ ನಮ್ಮ ಜವಾಬ್ದಾರಿಗಳು ಮತ್ತು ಬದ್ಧತೆಯ ಭಾಗವಾಗಿದೆ ಎಂದು ಹೇಳಿದರು.
ವರದಿ : ಸ್ವಾಮಿ ಬಳೇಪೇಟೆ