Ad imageAd image

ವಿವೇಕಾನಂದ ಪಪೂ ಕಾಲೇಜಿನಲ್ಲಿ ವಿಜ್ಞಾನ ಕ್ಲಬ್ ಉದ್ಘಾಟನೆ/ ವೈಜ್ಞಾನಿಕ ಅಧ್ಯಯನದ ಆಸಕ್ತಿಗೆ ವಿಜ್ಞಾನ ಕ್ಲಬ್ ಸಹಕಾರಿ

Bharath Vaibhav
ವಿವೇಕಾನಂದ ಪಪೂ ಕಾಲೇಜಿನಲ್ಲಿ ವಿಜ್ಞಾನ ಕ್ಲಬ್ ಉದ್ಘಾಟನೆ/ ವೈಜ್ಞಾನಿಕ ಅಧ್ಯಯನದ ಆಸಕ್ತಿಗೆ ವಿಜ್ಞಾನ ಕ್ಲಬ್ ಸಹಕಾರಿ
WhatsApp Group Join Now
Telegram Group Join Now

ತುರುವೇಕೆರೆ: -ವೈಜ್ಞಾನಿಕ ಅಧ್ಯಯನದಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ವಿಜ್ಞಾನ ಕ್ಲಬ್ ಸಹಕಾರಿ ಎಂದು ಉಪನ್ಯಾಸಕ ಲೋಕನಾಥ್ ತಿಳಿಸಿದರು.

ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜ್ಞಾನ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು ಯುವ ಸಮೂಹಕ್ಕೆ ಉದ್ಯೋಗ ಸೇರಿದಂತೆ ಉನ್ನತ ಮಟ್ಟದಲ್ಲಿ ಬೆಳೆದು ಯಶಸ್ಸನ್ನು ಸಾಧಿಸಲು ವಿಫುಲ ಅವಕಾಶಗಳಿವೆ ಎಂದರು.

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶ ಇಂದು ವಿಶ್ವದ ಪ್ರಬಲ ರಾಷ್ಟ್ರಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದಿದೆ. ವಿಜ್ಞಾನ ಕ್ಷೇತ್ರದಲ್ಲಿ ದೇಶದ ಸಾಕಷ್ಟುಮಹನೀಯರು ಅಪಾರವಾದುದನ್ನು ಸಾಧಿಸಿದ್ದಾರೆ. ವಿದ್ಯಾರ್ಥಿಗಳು ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಂಡು, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನ ಮಾಡಿ ಹೊಸ ಆವಿಷ್ಕಾರಗಳನ್ನು ಮಾಡಿ ದೇಶಕ್ಕೆ ಕೊಡುಗೆಯಾಗಿ ನೀಡಬೇಕೆಂದರು.

ಕಾಲೇಜಿನ ಪ್ರಾಂಶುಪಾಲ ಕಾಂತರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಉತ್ತೇಜಿಸಲು, ವೈಜ್ಞಾನಿಕ ಕೌಶಲ್ಯಗಳನ್ನು ಅರಿತುಕೊಳ್ಳಲು ಮತ್ತು ವೈಜ್ಞಾನಿಕ ಮನೋಭಾವ ಮತ್ತು ವೈಜ್ಞಾನಿಕ ತಾರ್ಕಿಕತೆಯನ್ನು ಪ್ರಚಾರ ಮಾಡಲು ಸಂಘಟಿತ ಪ್ರಯತ್ನವನ್ನು ಹೊಂದಬೇಕಂಬ ಆಶಯದಿಂದ ಕಾಲೇಜಿನಲ್ಲಿ ಕ್ಲಬ್ ಪ್ರಾರಂಭಿಸಲಾಗಿದೆ ಎಂದರು.

ವೈಯಕ್ತಿಕ, ಸಾಮಾಜಿಕ, ಪರಿಸರ ಮತ್ತು ತಾಂತ್ರಿಕ ಸಂದರ್ಭಗಳಲ್ಲಿ ವೈಜ್ಞಾನಿಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳ ಅರಿವು ಮತ್ತು ಕಾಳಜಿಯನ್ನು ಅಭಿವೃದ್ಧಿಪಡಿಸುವುದು. ವಿಜ್ಞಾನ ಕ್ಲಬ್ನ ವಿವಿಧ ಚಟುವಟಿಕೆಗಳ ಮೂಲಕ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವುದು ವಿಜ್ಞಾನ ಕ್ಲಬ್ನ ಉದ್ದೇಶ ಮತ್ತು ಗುರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾನವನ ದೇಹದ ಅಂಗಾಂಗಗಳು, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗದ ಮಾದರಿಗಳನ್ನು ನೆಲದ ಮೇಲೆ ರಂಗೋಲಿಯಲ್ಲಿ ವರ್ಣರಂಜಿತವಾಗಿ ಬಿಡಿಸಿ ಗಮನಸೆಳೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!