ಸೇಡಂ :-ತಾಲೂಕ ಆಸ್ಪತ್ರೆ ಯಲಿ ಆಗದ ಹೆರಿಗೆಯನ್ನೂ ಸರಳವಾಗಿ 108 ಅಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿದ 108 ಆಂಬುಲೆನ್ಸ್ ಸಿಬಂದಿ.
ಮಂಗಳವಾರ ಮಧ್ಯಾಹ್ನ ಮುಧೋಳ್ ಸಿ,ಎಚ್,ಸಿ ಯಿಂದ ತಾಲೂಕ ಆಸ್ಪತ್ರೆ ಗೆ ಗರ್ಭಿಣಿ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೇಡಂ ತಾಲೂಕಿನ ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ರವಾನೆ ಮಾಡಿದರು.ನಂತರ ಸೇಡಂ ಆಸ್ಪತ್ರೆಯಲ್ಲಿ ಕೂಡ ಹಿಂದೆ ಮೊದಲ ಹೆರಿಗೆ lscs ಆಗಿದೆ ಕೂಡಲೇ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರವಾನೆ ಮಾಡಿದರು ತದನಂತರ ಮಾರ್ಗ ಮಧ್ಯೆ ಮಳಖೇಡ ಹತ್ತಿರ ಹೆಚ್ಚಿನ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗರ್ಭಿಣಿಯಾದ ಸರೋಜಾ ಗಂಡ ಸಂಜು ಎನ್ನುವರು 108 ಆಂಬುಲೆನ್ಸ್ ನಲ್ಲೆ ನರ್ಸಿಂಗ್ ಅಫೀಸರ್ (ಇ,ಎಂ,ಟಿ) ಆದ ರಘುಪತಿ ರೆಡ್ಡಿ ಮತ್ತು ಚಾಲಕ ಚಾಂದ ಸಾಬ್ ಅವರ ಸಹಾಯದ ಮೂಲಕ ಮಹಿಳೆಗೆ ಹೆರಿಗೆಯನ್ನು ಆಂಬುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಮಹಿಳೆಯು ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮಗು ಆರೋಗ್ಯ ವಾಗಿದ್ದಾರೆ ಎಂದು ತಿಳಿಸಿದ ಕೂಡಲೇ ಅವರನ್ನು ಪುನಃ ವಾಪಸ್ ಸೇಡಂ ತಾಲೂಕಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ ನಂತರ ಅಲ್ಲಿನ ವೈದ್ಯೆರನ್ನು ಬೇಟಿ ಮಾಡಿ ವಿಷಯ ತಿಳಿಸಿ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.ವಿಷಯ ತಿಳಿದ ರೋಗಿಯ ಸಂಬಂಧಿಕರು ಸಿಬ್ಬಂದಿಯ ಸೇವೆಯನ್ನು ಕಂಡು ಅಭಿನಂದನೆ ಸಲ್ಲಿಸಿದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.