ಅಥಣಿ:-ಪಾಂಚ್ಯಜನ್ಯ ಯುವಸೇನಾ ಸಮಿತಿ ವತಯಿಂದ ರಘೋತ್ತಮ ಕಟ್ಟಿ ಅದ್ಯಕ್ಷರು ನೇತೃತ್ವದಲ್ಲಿ ಕಾರ್ಯಕ್ರಮದಲ್ಲಿ ಕಂಗೊಳಿಸಿದ ಶ್ರೀ ಕೃಷ್ಣ ರಾಧೆಯರ ವೇಷ ಭೂಷಣ… ಕಾರ್ಯಕ್ರಮಕ್ಕೆ ಪ್ರಥಮ ಬಹುಮಾನವಾಗಿ 50,000 ರೂಪಾಯಿ ನೀಡುವುದಾಗಿ ಘೋಷಿಸಿದ ಕಾಂಗ್ರೆಸ್ ಯುವ ಮುಖಂಡರಾದ ಚಿದಾನಂದ ಸವದಿ,ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗೋಕುಲಾಷ್ಟಮಿಯಂದು ಮುದ್ದು ಮುಖದ ಕೃಷ್ಣ ರಾಧೆಯರನ್ನು ನಮ್ಮ ಮಕ್ಕಳಲ್ಲಿ ಕಾಣಬಹುದಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡರಾದ ಚಿದಾನಂದ ಸವದಿ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಆರ್. ಎಚ್. ಕುಲಕರ್ಣಿ ಸಭಾಭವನದಲ್ಲಿ ಪಾಂಚ್ಯಜನ್ಯ ಯುವಸೇನಾ ವತಿಯಿಂದ ಶ್ರೀ ಕೃಷ್ಣ ರಾಧೆಯರ ವೇಷ ಭೂಷಣ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಟ್ಟ ಪುಟ್ಟ ಮಕ್ಕಳಲ್ಲಿ ನಿಜವಾದ ದೇವರನ್ನು ಕಾಣಬೇಕಾಗುತ್ತದೆ. ಸಾಕ್ಷಾತ ಕೃಷ್ಣ ರಾಧೆಯನ್ನು ಮಕ್ಕಳಲ್ಲಿ ಕಾಣಬಹುದಾಗಿದೆ. ರಘೋತ್ತಮ ಕಟ್ಟಿಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂತೋಷಕರ ವಿಷಯ ಪ್ರತಿ ವರ್ಷವೂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಮುಂದಿನ ವರ್ಷ ಈ ಕಾರ್ಯಕ್ರಮಕ್ಕೆ ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ ನೀಡುವುದಾಗಿ ಚಿದಾನಂದ ಸವದಿ ಘೋಷಿಸಿದರು..
ಕಾರ್ಯಕ್ರಮದ ಅಧ್ಯಕ್ಷರಾದ ರಘೋತ್ತಮ ಕಟ್ಟಿ ಮಾತನಾಡಿ, ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗೋಕುಲಷ್ಟಮಿಯು ಒಂದು , ಕೃಷ್ಣ ರಾಧೆಯರ ವೇಶ್ಯಭೂಷಣ ಹಾಗೂ ಕೃಷ್ಣ ರಾಧೆಯರ ನೃತ್ಯದ ಜೊತೆಗೆ ಮಕ್ಕಳಿಗೆ ಈಗಿನಿಂದಲೇ ವೇದಿಕೆಯ ಹಂಚಿಕೊಳ್ಳುವ ಧೈರ್ಯವನ್ನು ತುಂಬುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಂಡು ಬರಲಾಗುತ್ತದೆ. ಈ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನವಾಗಿ ಕಾಂಗ್ರೆಸ್ ಮುಖಂಡರಾದ ಶಿವು ಗುಡ್ಡಾಪುರವರಿಂದ 11 ಸಾವಿರ , ದ್ವಿತೀಯ ಬಹುಮಾನ ಆನಂದ್ ಕುಲಕರ್ಣಿ 7,500 ರೂಪಾಯಿ, ತೃತೀಯ ಬಹುಮಾನ ವಿಠ್ಠಲ ಕುಲಕರ್ಣ ಐದು ಸಾವಿರ ರೂಪಾಯಿ ಜೊತೆಗೆ ಮೂಮೆಂಟ್ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು ಎಂದ ಅವರು ಈ ಕಾರ್ಯಕ್ರಮಕ್ಕೆ ಮುಂದಿನ ವರ್ಷ ಕಾಂಗ್ರೆಸ್ ಯುವ ನಾಯಕರಾದ ಚಿದಾನಂದ ಸೌದಿ ಅವರು ಪ್ರಥಮ ಬಹುಮಾನವಾಗಿ 50,ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಮುಂದಿನ ವರ್ಷ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸೋಣ ಎಂದರು..
ಕಾರ್ಯಕ್ರಮದ ನಿರ್ಣಾಯಕರಾದ ಸುಮೇದಾ ಮೀರಜ ಮಾತನಾಡಿ, ಮಕ್ಕಳ ಚಿಕ್ಕಂದಿನಿಂದಲೇ ವೇದಿಕೆ ಏರುವ ಹವ್ಯಾಸ ಮಾಡಿಕೊಳ್ಳಬೇಕು ಈ ದೃಷ್ಟಿಕೋನ ಇಟ್ಟುಕೊಂಡು ರಘೋತ್ತಮ ಕಟ್ಟಿ ಅಧ್ಯಕ್ಷತೆಯಲ್ಲಿ ಶ್ರೀ ಕೃಷ್ಣ ರಾಧೆಯರ ವೇಷ ಭೂಷಣ ಹಾಗೂ ಏಕಾಭಿನಯ ಪಾತ್ರ ಸಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮಕ್ಕಳನ್ನು ಪ್ರೋತ್ಸಾಹಿಸುವಂತೆ ಕಾರ್ಯವನ್ನು ಆಯೋಜಕರು ಮಾಡುತ್ತಿದ್ದಾರೆ. ಈ ಮಕ್ಕಳಲ್ಲಿ ಸಾಕ್ಷಾತ್ ಕೃಷ್ಣ ರಾಧೆಯರನ್ನು ನೋಡಿದಷ್ಟು ಸಂತೃಪ್ತಿ ನಮಗಾಗಿದೆ ಎಂದರು..
ಇದೆ ಸಮಯದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಶಿವು ಗುಡ್ಡಾಪುರ, ಸಂಕೋನಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೀರಪ್ಪ ಕಡಗಂಚಿ,ರಷ್ಮೀ ಕಟ್ಟಿ,ಶ್ರೀದೇವಿ ಕುಲಕರ್ಣಿ, ವನಿತಾ ಕುಲಕರ್ಣಿ, ಪುಟ್ಟು ಹಿರೇಮಠ,ಗೀತಾ ತೋರಿ,ಅನಂದ ಕುಲಕರ್ಣಿ, ವಿಠ್ಠಲ್ ಕುಲಕರ್ಣಿ, ಮಹೇಶ್ ಕುಲಕರ್ಣಿ, ಅಥರ್ವ ದೇಶಪಾಂಡೆ,ಜಯಶ್ರೀ ಪೂಜಾರಿ,ಸರಸ್ವತಿ ನೇಮಗೌಡ,ರೂಪಾ ಕಾಂಬಳೆ,ಕಾರ್ಯಕ್ರಮದ ನಿರ್ಣಾಯಕರಾದ ರೋಹಿಣಿ ಯಾದವಾಡ,ಮೀಣಾ ದೇಶಪಾಂಡೆ, ಶ್ರೀಮತಿ ಅನ್ನೆಪ್ಪನ್ನವರ,ಸುಮೇದಾ ಮೀರಜ, ಪುಟ್ಟ ಪುಟ್ಟ ಮಕ್ಕಳು ಪಾಲಕರು ಅನೇಕರು ಉಪಸ್ಥಿತರಿದ್ದರು.
ವರದಿ : ರಾಜು ವಾಘಮಾರೆ