ಕಲಘಟಗಿ:- ತಾಲೂಕಿನ ಸಂಗಮೇಶ್ವರ ಗ್ರಾಮದ ಬಳಿಯಿರುವ ಸಣ್ಣ ಕೆರೆಯ ಒಡ್ಡು ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದೆ.ಕಳೆದ ಒಂದು ತಿಂಗಳಿಂದ ಸುರಿದ ಸತತ ಮಳೆಗೆ ಸಂಗಮೇಶ್ವರ ಗ್ರಾಮದ ಸಣ್ಣ ಕೆರೆ ಸಂಪೂರ್ಣ ಭರ್ತಿಯಾಗಿದೆ. ತೇವಾಂಶ ಹೆಚ್ಚಳವಾಗಿ ಬುಧವಾರ ನಸುಕಿನ ಜಾವ ಕೆರೆ ಕಟ್ಟೆ ಒಡೆದು ನೀರು ಅಪಾರ ಪ್ರಮಾಣದಲ್ಲಿ ಪೋಲಾಗಿದೆ.
ದುರಸ್ತಿ ಕಾರ್ಯ:ಕೆರೆ ಕಟ್ಟೆ ಒಡೆದಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಗ್ರಾಮಪಂಚಾಯಿತಿ ಮಂಡಳಿಯವರು ಕೆರೆ ದುರಸ್ತಿ ಕಾರ್ಯ ಕೈಗೊಂಡು ಹೆಚ್ಚಿನ ಹಾನಿ ಆಗದಂತೆ ತಡೆಯುವಲ್ಲಿ ಯಶಸ್ವಿಯಾದರು. ಜೆಸಿಬಿ ಯಂತ್ರದ ಮೂಲಕ ಒಡ್ಡಿಗೆ ಮಣ್ಣು ಹಾಕಿ ನೀರು ಪೋಲಾಗದಂತೆ ತಡೆಯಲಾಯಿತು. ಹೆಚ್ಚಿನ ಹಾನಿಸಂಭವಿಸಿದ್ದರೆ ಕೆರೆ ಕೆಳಗಿನನ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆ ಇತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷ ಅಧ್ಯಕ್ಷ ಸುರೇಶ ನೇಸರೇಕರ, ಸದಸ್ಯರಾದ ಕಿರಣ ಜಮದಡಕರ, ಮಂಜು ನೇಸರೇಕರ, ರೇಖಾ ಕಟಾಬ್ಳಿ, ಪಿಡಿಒ ಎ.ಎಚ್.ಮನಿಯಾರ, ಪರಶುರಾಮ ಜಾಧವ, ಮಂಜುನಾಥ ಪಿಳ್ಳುಕರ, ಹಾಲಪ್ಪ ಕಟಾಬ್ಳಿ ಹಾಗೂ ಗ್ರಾಮಸ್ಥರು ಕೆರೆ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ವರದಿ : ಶಶಿಕುಮಾರ ಕಲಘಟಗಿ