Ad imageAd image

ಕೊಲೆ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಲು ಒತ್ತಾಯ

Bharath Vaibhav
ಕೊಲೆ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಲು ಒತ್ತಾಯ
WhatsApp Group Join Now
Telegram Group Join Now

ಚಿಟಗುಪ್ಪ:-ಗುಣತೀರ್ಥ ವಾಡಿ ಯುವತಿ ಭಾಗ್ಯಶ್ರೀ ಪಂಡಿತ ಹತ್ಯೆ ಗೈದವರನ್ನು ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಟೋಕರಿ ಕೋಲಿ ಸಮಾಜ ಫಾತ್ಮಪುರ ಹಾಗು ಕನ್ನಡ ಸೇನೆ ಕರ್ನಾಟಕ ವತಿಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಮುಖ್ಯ ದ್ವಾರದಿಂದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ಬಸವರಾಜ ವೃತ್ತದವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾ‌ರ್ ಮಂಜುನಾಥ ಪಂಚಾಳ ಅವರಿಗೆ ಸಲ್ಲಿಸಲಾಯಿತು.
ಯುವತಿಯನ್ನು ಅಪಹರಿಸಿ ಕೊಲೆ ಮಾಡಿದವರನ್ನು ಗಲ್ಲಿಗೇರಿಸಬೇಕು ಇಲ್ಲವೆ ಎನ್‌ಕೌಂಟರ್ ಮಾಡಬೇಕು.ಕಾನೂನಿನಿಂದ ಆಗದಿದ್ದರೆ ಕೊಲೆಗಡಕರಿಗೆ ತಂದು ನಮ್ಮ ಕೈಗೆ ಒಪ್ಪಿಸಿ ಕಲ್ಲಿನಿಂದ ಹೊಡೆದು ಸಾಯಿಸುತ್ತೇವೆ.ಬಡ ಕುಟುಂಬಕ್ಕೆ ಆರ್ಥಿಕ ನೆರವು,ಸಾಮಾಜಿಕ ಭದ್ದತೆ ನೀಡಬೇಕು.ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ,ಕಿರುಕುಳ,ಕೊಲೆ ತಪ್ಪಿಸಲು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರಾದ ದತ್ತಾತ್ರೇಯ ಗುರುಜಿ,ನರಸಪ್ಪ ನರನಾಳ,ಅರುಣ ಬಾವಗಿ,ಈಶ್ವರ ನೇಳಗಿ,ಚಿತ್ರಮ್ಮಾ,ರಾಜಕುಮಾರ ಹಡಪದ,ಸುರೇಶ ಗಾಂಗ್ರೆ ಒತ್ತಾಯಿಸಿದರು.ಅಶೋಕ ಕಾಗೆ ಮತ್ತು ಪವನ ಪೂಜಾರಿ ಮನವಿ ಪತ್ರ ಓದಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜಕುಮಾರ ಡೆಬ್ಬಿ,ಸೋಮನಾಥ ಮಡಿವಾಳ,ಪ್ರವೀಣರಾಜಾಪುರ,ಜರೆಪ್ಪ ಜಮಾದಾರ,ಸುಧಾಕರ ಗಡ್ಡದೋರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ:-ಸಜೀಶ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!