ಔರಾದ:- ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮ ಪಂಚಾಯತ ಅಧಿಕಾರಿಗಳ ವಿರುದ್ಧ ನಾಗರೀಕರು ಮಾಡಿರುವ ಗಂಭೀರ ಆರೋಪಗಳ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.ಗೌಂಡಗಾಂವ್ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಆರೋಪ.
ಬೀದರ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮ ಪಂಚಾಯತ ಅಧಿಕಾರಿಗಳು ಹದಿನೈದನೇ ಹಣಕಾಸಿನ ಅನುದಾನದಲ್ಲಿ ಬೆಳಕುಣಿ ಚೌದ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗೌಂಡಗಾಂವ್ ಗ್ರಾಮದಲ್ಲಿ ವಿಶೇಷ ಚೇತಕರಿಗಾಗಿ ಶೌಚಾಲಯ ನಿರ್ಮಾಣ ಮಾಡಲು ಎರಡು ಲಕ್ಷ ಅನುದಾನವನ್ನು ಬೀಡುಗಡೆ ಮಾಡಿಸಿ ಶೌಚಾಲಯ ಕಟ್ಟದೆ ಸರ್ಕಾರಿ ಶಾಲೆಯಲ್ಲಿನ ಹಳೆಯ ಶೌಚಾಲಯಕ್ಕೆ ಬಣ್ಣ ಬಳೆದು ಹಣ ಲೂಟಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ
ಅಲ್ಲದೆ ಇದೆ ತಾಂಡದ ಕೂಡಿಯು ನೀರನ ಪೈಪ್ ಲೈನ್ ದುರಸ್ತಿ ಗಾಗಿ ಹಣ ಬಿಡುಗಡೆ ಮಾಡಿ ಪೈಪ್ ಲೈನ್ ದುರಸ್ತಿ ಮಾಡದೆ ಹಣ ಲೂಟಿ ಮಾಡಿದ್ದಾರೆ ಮಳೆಗಾಲದಲೂ ಕಿಶನ ತಾಂಡದ ಜನರು ಕುಡಿಯುವ ನೀರಿಗಾಗಿ ಅಲೆಯವಂತಾಗಿದೆ , ತಾಂಡದ ಮಹಿಳೆಯರು ಅಧಿಕಾರಿಗಳ ಮೇಲೆ ಶಾಪ ಹಾಕುತಾ ಮಾದ್ಯಮದವರ ಮುಂದೆ ತಮ್ಮ ಅಳಲನ್ನು ತೊಡಿ ಕೊಂಡರು.
ಕಿಶನ ತಾಂಡದ ಯುವಕ ಬಾಲಾಜಿ ಜಾದವ್ ಮಾತನಾಡಿ ತಾಂಡದ ದನಕರುಗಳು ಕುಡಿಯಲು ಅನುಕೂಲವಾಗಲು ಹಲವು ವರ್ಷಗಳ ಹಿಂದೆ ಕಟ್ಟಲಾಗಿದೆ ನೀರಿನ ತೋಟಿ ಇದು ಒಡೆದು ಹಾಳಾಗಿ ಇದ್ರಲ್ಲಿ ನೀರು ನಿಲ್ಲುತಿಲ್ಲ ಇದರಿಂದ ಗ್ರಾಮದ ದನಕರುಗಳು ನೀರಿಗಾಗಿ ಪರದಾಡುವಂತಾಗಿದೆ ಹಲವು ಬಾರಿ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಹಾಗೂ PDO ಗೆ ದೂರು ನೀಡಿದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ತಮ್ಮ ಅಳಲನ್ನು ತೊಡಿಕೊಂಡರು.
ಗೌಂಡಗಾಂವ್ ಗ್ರಾಮದ ಹಿರಿಯ ನಾಗರಿಕರಾದ ಗೊವಿಂದರಾವ್ ಲೊಣಿ ಅವರು ಮಾತನಾಡಿ ನಮ್ಮ ಗ್ರಾಮ ಪಂಚಾಯತ ನಲ್ಲಿ ನಡೆಯುತಿರುವ ಭ್ರಷ್ಟಾಚಾರದ ಬಗ್ಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದರೆ ಅವರು ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ ಆದರೆ ಇಲ್ಲಿಯವರೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮೇಲಾಧಿಕಾರಿಗಳು ಕಳುಹಿಸಿರುವ ಪತ್ರವನ್ನು ಇಲ್ಲಿಯವರೆಗೆ ನೋಡದೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ.
ಮುಂದಿನ ದಿನಮಾನಗಳು ನಮಗೆ ನ್ಯಾಯ ಸಿಗದಿದ್ದಲ್ಲಿ ಗ್ರಾಮ ಪಂಚಾಯತ ಎದುರುಗಡೆ ಉಪವಾಸ ಧರಣಿ ಕೂಡುತ್ತಿವೆ ಎಂದು ಮಾಧ್ಯಮದ ಮುಖಾಂತರ ತಿಳಿಸಿದರು.
ವರದಿ :- ಸೂರ್ಯಕಾಂತ್