ಬೆಳಗಾವಿ: ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿ ಕುರಿತು ನೀಡಿದ ತೀರ್ಪಿನ ವಿರುದ್ಧ ಬಿ ಎಸ್ ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹೇಳಿಕೆ ವಿರೋಧಿಸಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಬಹುಜನ ಪಕ್ಷವನ್ನು ತೊರೆಯಲ್ಲಿದ್ದೆವೆ ಎಂದು ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಒಳ ಮೀಸಲಾತಿ ನೀಡುವಲ್ಲಿ ರಾಜ್ಯಸರ್ಕಾರಕ್ಕೆ ಮದ್ಯ ಪ್ರವೇಶಿಸುವ ಅವಕಾಶವಿದೆ ಎಂದು ತಿಳಿಸಿದೆ. ಒಳಮೀಸಲಾತಿ ಕುರಿತು ಸುಮಾರು ವರ್ಷಗಳಿಂದ ಬಿ ಎಸ್ ಪಿ ಪಕ್ಷದ ನಾಯಕರನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಲಕ್ನೋದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಂತರ ಒಳ ಮೀಸಲಾತಿ ಕುರಿತು ರಾಜ್ಯ ನಾಯಕರುಗಳ ಜೊತೆ ಚರ್ಚಿಸಲಾಗುವುದೆ ಎಂದು ತಿಳಿಸಿದ್ದರು. ಆದರೆ ರಾಜ್ಯ ನಾಯಕರ ಜೊತೆ ಚರ್ಚಿಸದೆ ನಿರಾಸೆಯುಂಟಾಗಿದೆ. ನೇರವಾಗಿ ಭೇಟಿಯಾಗಲು ಸಹ ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಂಧ್ರಪ್ರದೇಶ ಮತ್ತು ತೆಲಂಗಾಣ ನಾಯಕರಿಗೂ ಅಪಮಾನವಾಗಿದೆ. ರಾಷ್ಟ್ರೀಯ ಅಧ್ಯಕ್ಷರ ಈ ನಡುವಳಿಗೆ ಬೇಸತ್ತು ರಾಜ್ಯ ನಾಯಕರು ಪಕ್ಷವನ್ನು ತೊರೆಯಲು ತಿರ್ಮಾಣಿಸಿದ್ದೇವೆ ಎಂದರು.
ಈ ವೇಳೆ ಜಿಲ್ಲಾ ಅಧ್ಯಕ್ಷ ಯಮನಪ್ಪ ತಳವಾರ, ಉಪಾಧ್ಯಕ್ಷ ಸರ್ದಾರ ಮಿರ್ಜನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಸಿಲೋಹಿತ್, ಕಾರ್ಯದರ್ಶಿ ಸುರೇಶ ಮಾದರ ಉಪಸ್ಥಿತರಿದ್ದರು.