ಬೆಳಗಾವಿ : ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಜಿಲ್ಲೆಯ ಕಚೇರಿಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ನಿವೃತ್ತ ಶಿಕ್ಷಕರನ್ನು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಅಧ್ಯಕ್ಷರಾದ ಶ್ರೀ ಸುಭಾಷ ಪಾಟೀಲ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿ ಅವರು ನಮ್ಮೆಲ್ಲರ ಬದುಕಿನಲ್ಲಿ ತುಂಬಾನೇ ಗುರುಗಳಿರುತ್ತಾರೆ, ಆದರೆ ಕೆಲವೊಂದು ಗುರುಗಳು ನಮ್ಮ ಬದುಕನ್ನು ರೂಪಿಸುವಲ್ಲಿ ತುಂಬಾ ಮಹತ್ವದ ಪಾತ್ರವನ್ನು ವಹಿಸಿರುತ್ತಾರೆ. ಹಾಗೂ ” ಮುಂದೆ ಗುರಿ ಹಿಂದೆ ಗುರು ಇರಬೇಕು ಎಂದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನಿಲ್ ಬೆನಕೆ,ಮಾಜಿ ಶಾಸಕರಾದ ಶ್ರೀ ವಿಶ್ವನಾಥ್ ಪಾಟೀಲ. ಶ್ರೀ ಮಹಾಂತೇಶ ದೊಡ್ಡಗೌಡರ, ಶ್ರೀ ಅರವಿಂದ್ ಪಾಟೀಲ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂದೀಪ್ ದೇಶಪಾಂಡೆ. ಶ್ರೀ ಕೆ ವಿ ಪಾಟೀಲ್ . ಶ್ರೀಮತಿ ಧನಶ್ರೀ ದೇಸಾಯಿ.ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಸೋನಾಲಿ ಸರ್ನೋಬತ್, ಜಿಲ್ಲಾ ಉಪಾಧ್ಯಕ್ಷರುಗಳಾದ ಶೀ ಪ್ರಮೋದ್ ಕೋಚೆರಿ . ಶ್ರೀ ಯುವರಾಜ್ ಜಾದವ. ಬಸನಗೌಡ ಕೋಳದೂರ ಸದ್ಯಸತ್ವ ಅಭಿಯಾನ ಸಹ ಸಂಚಾಲಕರು ಶ್ರೀ ಬಾಬಾಗೌಡ ಬೀರಾದರ. ಶ್ರೀ ಮಲ್ಲಿಕಾರ್ಜುನ ಮಾದನ್ನವರ.ಮಾದ್ಯಮ ಸಹ ಸಚಾಲಕ ಬಾಳೇಶ ಚವ್ವನ್ನವರ, ಶ್ರೀ ಮಹೇಶ್ ಮೋಹಿತೆ, ಶ್ರೀ ಸಂತೋಷ್ ದೇಶನೂರ, ಶ್ರೀ ವಿಠ್ಠಲ ಸಾಯನ್ನವರ ಮಂಡಲ ಅಧ್ಯಕ್ಷರುಗಳು ಹಾಗೂ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ:- ಪ್ರತೀಕ ಚಿಟಗಿ