Ad imageAd image

ಯೂಟ್ಯೂಬ್ ನೋಡಿಕೊಂಡು ನಕಲಿ ವೈದ್ಯನ ಶಸ್ತ್ರಚಿಕಿತ್ಸೆ : 15 ವರ್ಷದ ಬಾಲಕ ಸಾವು 

Bharath Vaibhav
ಯೂಟ್ಯೂಬ್ ನೋಡಿಕೊಂಡು ನಕಲಿ ವೈದ್ಯನ ಶಸ್ತ್ರಚಿಕಿತ್ಸೆ : 15 ವರ್ಷದ ಬಾಲಕ ಸಾವು 
WhatsApp Group Join Now
Telegram Group Join Now

ಬಿಹಾರದ ಸರನ್ ಜಿಲ್ಲೆಯಲ್ಲಿ ಯೂಟ್ಯೂಬ್ ನೋಡಿಕೊಂಡು ನಕಲಿ ವೈದ್ಯ ಶಸ್ತ್ರಚಿಕಿತ್ಸೆ ಮಾಡಿದ್ದು, 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಅಜಿತ್ ಕುಮಾರ್ ಪುರಿ ಎಂದು ಗುರುತಿಸಲಾದ ನಕಲಿ ವೈದ್ಯ ಮಾಡಿದ ಪಿತ್ತಕೋಶದ ಕಲ್ಲಿನ ಶಸ್ತ್ರಚಿಕಿತ್ಸೆಯ ನಂತರ 15 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.ಕಾರ್ಯವಿಧಾನಕ್ಕೆ ಮಾರ್ಗದರ್ಶನ ನೀಡಲು ಯೂಟ್ಯೂಬ್ ವೀಡಿಯೊಗಳನ್ನು ಅವಲಂಬಿಸಿದ್ದ ವೈದ್ಯ ಈಗ ಓಡಿಹೋಗಿದ್ದಾನೆ.

ಶುಕ್ರವಾರ ರಾತ್ರಿ ವಾಂತಿ ಮತ್ತು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಮಧುರಾದಲ್ಲಿರುವ ಅಜಿತ್ ಕುಮಾರ್ ಪುರಿಯ ಕ್ಲಿನಿಕ್‌ ಗೆ ದಾಖಲಿಸಲಾಗಿತ್ತು. ಹುಡುಗನ ಕುಟುಂಬದ ಒಪ್ಪಿಗೆಯಿಲ್ಲದೆ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಲು ಪ್ರಾರಂಭಿಸಿದ ಅಜಿತ್ ಕುಮಾರ್ ಈ ವೇಳೆ ಮೊಬೈಲ್ ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಅವುಗಳನ್ನು ಅನುಸರಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾನೆ.

ಬಾಲಕನ ಪೋಷಕರು ಪ್ರಶ್ನಿಸಿದಾಗ ಡಾಕ್ಟರ್ ನಾನೋ, ನೀವೋ ಎಂದು ಮರು ಪ್ರಶ್ನಿಸಿ ಸುಮ್ಮನಿರಿಸಿದ್ದಾನೆ. ಬಾಲಕನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಪೋಷಕರು ಬಾಲಕನನ್ನು ಪಾಟ್ನಾದ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಮಾರ್ಗಮಧ್ಯೆ ಯುವಕ ಮೃತಪಟ್ಟಿದ್ದಾನೆ. ಬಾಲಕನ ಸಾವಿನ ನಂತರ ಪುರಿ ಸ್ಥಳದಿಂದ ಪರಾರಿಯಾಗಿದ್ದಾನೆ,

ಕುಟುಂಬದವರು ಪೊಲೀಸ್ ದೂರು ದಾಖಲಿಸಿದ್ದಾರೆ. ಅಧಿಕಾರಿಗಳು ನಕಲಿ ವೈದ್ಯ ಮತ್ತು ಅವರ ಕ್ಲಿನಿಕ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಲಕನ ಮೃದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!