ರಾಯಚೂರು :-ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಸಿರವರ ದಲ್ಲಿರುವ ಹನುಮಾನ್,ಟ್ರೆಡ ರ್ಸ್ ರಸಾಗೊಬ್ಬರ ಅಂಗಡಿ ಯಲ್ಲಿ ಜೈವಿಕ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶ ಓಜೊ ಕಂ ಪ ನಿಯ ಸುಪ್ರೀಂ ಹೈರಿಸಲ್ಟ್ ಮತ್ತು ನೋವ ಕಂಪನಿಯ ಈ ಎ ಸ್ ಕಾಟ್ ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದು ಮೌನ ವಹಿಸಿರುವ ಜಾಗೃತ ದಳ ಜಂಟಿ ನಿರ್ದೇಶಕಿ ಆರ್ ದೇವಿಕ ಜಂಟಿ ನಿರ್ದೇಶಕರು ಜೈಪ್ರಕಾಶ್ ಜಾಗೃತ ದಳ ಸಹಾಯಕ ಕೃಷಿ ನಿರ್ದೇಶಕಿ ಶರಣಮ್ಮ ತಿಳಿದು ತಿಳಿಯದಂತೆ ಮೌನ ವಹಿಸಿರುವುದು ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಿಂದ ಹಾನಿಯಾಗಿ ಒಂದೆಡೆ ಬೆಳೆಗಳು ನಾಶವಾಗುತ್ತಿದ್ದು ರೈತರಿಗೆ ವಂಚನೆ ಮಾಡಿ ನಕಲಿ ಜೈವಿಕ ಭಯೋ ಹೆಸರಿನಲ್ಲಿ ಕ್ರಿಮಿನಾಶಕಗಳನ್ನು ಮಾರಾಟ ಮಾಡಿ ಇಷ್ಟೆಲ್ಲ ವಂಚನೆ ಮಾಡಿದರು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಈಗಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಕೃಷಿ ಆಯುಕ್ತರು ಕರ್ನಾಟಕ ರಾಜ್ಯ ಜಾಗೃತ ದಳ ಆಯುಕ್ತರು ರವರು ರೈತರಿಗೆ ವಂಚನೆ ಮಾಡುತ್ತಿರುವುದನ್ನು ತಡೆಗಟ್ಟುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಾಗಿದೆ.
ವರದಿ:- ಗಾರಲದಿನ್ನಿ ವೀರನಗೌಡ