ಸಿಂಧನೂರು:- ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತುರುವಿಹಾಳ ಪಟ್ಟಣ ಪಂಚಾಯಿತಿ 14 ವಾರ್ಡುಗಳನ್ನು ಒಳಗೊಂಡಿದೆ ಎಲ್ಲಾ ವಾರ್ಡ್ಗಳಲ್ಲಿ – ಕುಡಿಯುವ ನೀರು. ಚರಂಡಿ. ಮಹಿಳಾ ಶೌಚಾಲಯ. ಸ್ವಚ್ಛತೆ. ರಸ್ತೆ. ಇನ್ನು ಅನೇಕ ಮೂಲಭೂತ ಸೌಕರ್ಯಗಳಿಂದ ನಿವಾಸಿಗಳು ವಂಚಿತರಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಮತ್ತು ಎಲ್ಲಾ ವಾರ್ಡ್ಗಳಲ್ಲಿ ಶುದ್ಧವಾದ ಕುಡಿಯುವ ನೀರು ಒದಗಿಸಬೇಕು ಪಟ್ಟಣದಲ್ಲಿ ಎಲ್ಲಿ ಬೇಕಂದರೆ ಅಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು ಆಯಕಟ್ಟಿನ ಸ್ಥಳದಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು.
ಮತ್ತು ಎಲ್ಲಾ ವಾರ್ಡ್ಗಳಲ್ಲಿ ಚರಂಡುಗಳನ್ನು ನಿರ್ಮಿಸಬೇಕು ಹಾಗೂ ನಿವಾಸಿಗಳು ಎಲ್ಲಿಂದಲ್ಲಿ ಕಸ ಚೆಲ್ಲುವುದರಿಂದ ಕಸದ ವಿಲಿವರಿವನ್ನು ನೋಡಿಕೊಳ್ಳಬೇಕು ಎಲ್ಲಾ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದರು ಕೂಡ ಕ್ರಮ ವಹಿಸಲಿ ಇರುವುದು ನಿವಾಸಿಗಳಿಗೆ ಬೇಸರದ ಸಂಗತಿಯಾಗಿದೆ ಇನ್ನಾದರೂ ಶೀಘ್ರವಾಗಿ ನಮ್ಮ ಸಮಸ್ಯೆಯನ್ನು ಬಗೆಹರಿಸುಬೇಕೆಂದು ಪಟ್ಟಣ ಪಂಚಾಯತಿಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ= ಅನ್ವರ್ ಪಾಸ್ ಮೇಸ್ತ್ರಿ ದಳಪತಿ.. ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರು.. ಹೊನ್ನೂರಪ್ಪ ಕುಂಬಾರ್.. ಪಾಮೇಶ್ ದಲಿತ ಮುಖಂಡರು.. ರಮೇಶ್.. ನಾಗಲಿಂಗಪ್ಪ.. ಶಿವಪುತ್ರಪ್ಪ.. ಮತ್ತು ಪಟ್ಟಣದ ನಿವಾಸಿಗಳು ಇದ್ದರು.
ವರದಿ: -ಬಸವರಾಜ ಬುಕ್ಕನಹಟ್ಟಿ