Ad imageAd image

ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಪಿಡಿಓ – ಇಂಜಿನಿಯರ್ 

Bharath Vaibhav
ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಪಿಡಿಓ – ಇಂಜಿನಿಯರ್ 
WhatsApp Group Join Now
Telegram Group Join Now

ಬೀದರ್ : ಗ್ರಾಮ ಪಂಚಾಯತಿಯ ಅಧಿಕಾರಿಗಳಿಬ್ಬರು ಬಸ್ ಸ್ಟ್ಯಾಂಡ್ ಬಳಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಸಿಕ್ಕಿಹಾಕಿಕೊಂಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಸಮ್ ನಲ್ಲಿ ನಡೆದಿದೆ.

ಕೋಸಮ್ ಗ್ರಾಮ ಪಂಚಾಯತಿಯ ಪಿಡಿಒ ರಾಹುಲ್ ಹಾಗೂ ಜೆಇ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ರಾಮೇಶ್ವ‌ರ್ ಎಂಬುವವರು 24 ಲಕ್ಷ ರೂ.ಬಿಲ್ ಪಾವತಿಗೆ ಕಮಿಷನ್ ರೂಪದಲ್ಲಿ ಒಂದು ಲಕ್ಷ ಹಣ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ.

ಕೋಸಮ್ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕೆಲಸ ಮಾಡಿದ್ದ ಗುತ್ತಿಗೆದಾರ ಅರವಿಂದ ಭಾಲ್ಕೆಯವರು 24 ಲಕ್ಷ ಬಿಲ್‌ ಪಾಸ್ ಮಾಡಲು ಪಿಡಿಓ ಬಳಿ ಕೇಳಿದ್ದರು. ಈ ವೇಳೆ ಜೆಇ ಹಾಗೂ ಪಿಡಿಓ ಬಿಲ್ ಪಾವತಿ ಮಾಡಬೇಕಾದರೆ 2.55 ಲಕ್ಷ ನೀಡುವಂತೆ ಕೇಳಿದ್ದರು.

ಈ ಹಿನ್ನಲೆ ಅರವಿಂದ್ ಭಾಲ್ಕೆಯವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು, ಈ ಹಿನ್ನೆಲೆಯಲ್ಲಿ ಬಸ್ ಸ್ಟಾಂಡ್ ಬಳಿ ಬಿಲ್ ಪಾವತಿ ಮಾಡಲು ಮುಂಗಡವಾಗಿ 1 ಲಕ್ಷ ಕಮಿಷನ್ ಪಡೆಯುತ್ತಿದ್ದ ವೇಳೆ ಡಿಎಸ್ಪಿ ಹನುಮಂತರಾಯ್ ಹಾಗೂ ಇನ್ಸ್‌ಪೆಕ್ಟರ್‌ ಬಾಬಾಸಾಹೇಬ್ ಪಾಟೀಲ್ ನೇತೃತ್ವದ ಎರಡು ತಂಡಗಳು ದಾಳಿ ನಡೆಸಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!