ಸೇಡಂ: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ವಿಚಾರದ ಬೆನ್ನಲ್ಲೇ ನೂತನ ಮುಖ್ಯಮಂತ್ರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಎಂಬುದು ಕೇಳಿ ಬರುತಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ವೈರಲ್ ಮಾಡಿದರೆ.
ನೂತನ ಮುಖ್ಯಮಂತ್ರಿ ನಮ್ಮ ಭಾಗದ ಬಹಳ ಸಜ್ಜನಿಕೆಯ ವ್ಯಕ್ತಿ ಜನ ಮೆಚ್ಚಿದ ನಾಯಕ, ಬಡವರ ಬಂದು, ಲೋಕ ಕಲ್ಯಾಣಕ್ಕಾಗಿ ಹಗಲು ಇರುಳು ದುಡಿಯುವ ವ್ಯಕ್ತಿ ದಣಿವು ಅರಿಯದ ನಾಯಕರು, ಇಚ್ಚಿಸನ ಬೆಳೆವಣಿಗೆಯ ಪ್ರಕಾರ ನಮ್ಮ ಮುಖ್ಯಮಂತ್ರಿಗಳು ಡಾ.ಶರಣಪ್ರಕಾಶ್ ಪಾಟೀಲ್ ಅವರು ಎಂದು ಹೇಳಲು ತುಂಬಾ ಹೆಮ್ಮೆಯ ಸಂಗತಿ, ಇತ್ತೀಚಿನ ಹೈಕಮಾಂಡ್ ನಲ್ಲಿ ತುಂಬಾನೇ ಬೆಳವಣಿಗೆಯ ಇಂಟರ್ನಲ್ ರಿಪೋರ್ಟ್ ಮಾಹಿತಿ ಪ್ರಕಾರ ನಮ್ಮ ಭಾಗದ ನಾಯಕರು 371ಜೆ ಕಲಾಂ ನ ರೂವಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ನಮ್ಮ ನಾಯಕರಾದ ಶರಣಪ್ರಕಾಶ್ ಪಾಟೀಲ್ ಅವರ ಹೆಸರು ಪ್ರಸ್ತಾಪ ಮಾಡಿದ್ದು ತುಂಬಾ ಹೆಮ್ಮೆಯ ಸಂಗತಿ.
ಅಷ್ಟೇ ಅಲ್ಲದೆ ಡಾ.ಪಾಟೀಲರು ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅತ್ಯಂತ ಆತ್ಮೀಯರು ಆಗಿದ್ದು ನಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿ ಎಂಬುದು ಖಚಿತ ಆಗಬಹುದು ಅದಕ್ಕಾಗಿ ದಿನಾಂಕ ಇದೆ ಸೆಪ್ಟೆಂಬರ್ 13ವರೆಗೆ ಕಾದು ನೋಡಬೇಕಿದೆ ಎಂದು ಬರೆದಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್