Ad imageAd image

ಮಾಜಿ ಪ್ರಿಯತಮೆಗೆ ಬ್ಲ್ಯಾಕ್ ಮೇಲ್ : ಕಿರುತೆರೆ ನಟ ವರುಣ್  ವಿರುದ್ಧ ಎಫ್‌ಐಆರ್ ದಾಖಲು

Bharath Vaibhav
ಮಾಜಿ ಪ್ರಿಯತಮೆಗೆ ಬ್ಲ್ಯಾಕ್ ಮೇಲ್ : ಕಿರುತೆರೆ ನಟ ವರುಣ್  ವಿರುದ್ಧ ಎಫ್‌ಐಆರ್ ದಾಖಲು
WhatsApp Group Join Now
Telegram Group Join Now

ಬೆಂಗಳೂರು: ಮಾಜಿ ಪ್ರಿಯತಮೆಗೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆಯೊಡ್ಡಿದ ಆರೋಪದಲ್ಲಿ ಐಟಿ ಆಕ್ಟ್ ಅಡಿ ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ಕೇಸ್ ದಾಖಲಾಗಿದೆ.

ಬೆಂಗಳೂರು ಪಶ್ಚಿಮ ವಲಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ವರುಣ್ ಆರಾಧ್ಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ನಟ ವರುಣ್ ಆರಾಧ್ಯ ವಿರುದ್ಧ ಯುವತಿಯೊಬ್ಬರು ಕೇಸ್ ದಾಖಲಿಸಿದ್ದಾರೆ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ದೂರು ನೀಡಿದ್ದಾರೆ. ಈ ಹಿಂದೆ ವರುಣ್ ಆರಾಧ್ಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. 2019ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದ ಯುವತಿಯನ್ನು ಪ್ರೀತಿಸಿ ವಂಚಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದ ಮಾರ್ಕೆಟಿಂಗ್ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸಿದ್ದ ವರುಣ್ ಹಾಗೂ ಯುವತಿ ಸುಮಾರು ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಯಲ್ಲಿದ್ದರು. 2023ರಲ್ಲಿ ವರುಣ್ ಮೊಬೈಲ್ ನೋಡುವಾಗ ಯುವತಿಗೆ ಆಘಾತ ಕಾದಿತ್ತು. ಫೋನ್ ನಲ್ಲಿ ಮತ್ತೊಬ್ಬ ಯುವತಿ ಜೊತೆಗಿದ್ದ ಫೋಟೋ ಪತ್ತೆಯಾಗಿದ್ದು, ಯುವತಿ ಶಾಕ್ ಆಗಿದ್ದರು.

ಈ ಬಗ್ಗೆ ಪ್ರಶ್ನೆ ಮಾಡಿದ್ದ ಯುವತಿ, ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ತಾನು ಯುವತಿ ಜೊತೆಗೆ ಸಂಪರ್ಕದಲ್ಲಿದ್ದ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ವರುಣ್ ಬೆದರಿಕೆಯೊಡ್ಡಿದ್ದ. ತನ್ನ ಖಾಸಗಿ ಫೋಟೋಗಳ ಬಗ್ಗೆ ಬಾಯಿಬಿಡದಂತೆ ಮಾಜಿ ಪ್ರಿಯತಮೆಗೆ ಹೆದರಿಸಿದ್ದ.

ಅಲ್ಲದೇ ಯುವತಿ ತನ್ನ ಜೊತೆ ಇರುವ ಖಾಸಗಿ ಫೋಟೊಗಳನ್ನು ಕಳುಹಿಸಿ, ನನ್ನ ಬಳಿ ನಿನ್ನ ಜೊತೆಯಿರುವ ಖಾಸಗಿ ಫೋಟೋ, ವಿಡಿಯೋಗಳಿವೆ.

ನೀನು ನನ್ನ ವಿಚಾರ ಬಾಯ್ಬಿಟ್ಟರೆ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಬೆದರಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!