ಹಾವೇರಿ:-ಶಿಗ್ಗಾಂವ್ ವಿಧಾನ ಸಭಾ ಕ್ಷೇತ್ರದ ಉಪಚುನಾವಣಾ ಪೂರ್ವ ಭಾವಿ ಸಭೆಯು ಎಸ್ ಡಿ ಪಿ ಆಯ್ ಜಿಲ್ಲಾಧ್ಯಕ್ಷ ಖಾಸಿಮ್ ರಬ್ಬಾನಿ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಅವರ ನೇತೃತ್ವದಲ್ಲಿ ಜರುಗಿತು.ಈ ಸಭೆಯಲ್ಲಿ ಚುನಾವಣೆಯ ಪೂರ್ವತಯಾರಿ ಮತ್ತು ಕಾರ್ಯ ಯೋಜನೆಗಳ ಕುರಿತು ಸುಧೀರ್ಘ ವಾಗು ಚರ್ಚೆಯನ್ನು ನಡೆಸಲಾಯಿತು.
ಸಂತರ ಮಾತನಾಡಿದ ಜಿಲ್ಲಾದ್ಯಕ್ಷ ರಬ್ಬಾನಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗಲೂ ಅಭಿವೃದ್ಧಿ ಮಾಡದ ಬಸವರಾಜ್ ಬೊಮ್ಮಯಿ ಅದೇ ರೀತಿ ಕಚ್ಚಾಟದಲ್ಲ ಮುಳುಗಿರುವ ಕಾಂಗ್ರೆಸ್ ಪಕ್ಷದಿಂದ ಶಿಗ್ಗಾಂವ್ ವಿಧಾನ ಸಭಾ ಕ್ಷೇತ್ರದ ಜನರ ನೋವು , ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಿಲ್ಲ. ಜನಪರವಾಗಿ ನಿಲ್ಲಬಲ್ಲವರು ಶಾಸಕರಾಗಿ ಬರಬೇಕು. ಜನಪರವಾಗಿ ಕೆಲಸಮಾಡಲು, ಜನರ ಎಲ್ಲಾ ಸಂಕಷ್ಟಗಳಿಗೆ ಸ್ಪಂದಿಸಲು SDPI ಯಿಂದ ಮಾತ್ರ ಸಾಧ್ಯ. ಹಾಗಾಗಿ ಚುನಾವಣೆಯ ಕೊನೆಯ ವರೆಗೆ ಸನ್ನದ್ದ ರಾಗಿ ಕೆಲಸ ನಿರ್ವಹಿಸಬೇಕೆಂದು ತೀರ್ಮಾನಿಸಲಾಯಿತು ಎಂದರು.
ಅದೇ ರೀತಿ ಕೇಂದ್ರ ಸರ್ಕಾರ ತರಲು ಹೊರಟಿರುವ ವಖ್ಫ್ ತಿದ್ದುಪಡಿ ಮಾಸೂದೆ ವಿರುದ್ಧದ ನಡೆಸಲುಉದ್ದೇಶಿಸಿರುವ ಪ್ರತಿಭಟನೆಯ ಕುರಿತು ಚರ್ಚೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಭಾಗವಹಿಸುವಂತೆ ಮಾಡಬೇಕೆಂದು ತೀರ್ಮಾನ ಕೈಗೊಂಡಿದ್ದೆವೆ ಎಂದರು.ಸಭೆಯಲ್ಲಿ ಅಸೆಂಬ್ಲಿ ಅಧ್ಯಕ್ಷ ಅಕ್ಬರಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಸೀರ್ ಇರ್ಷಾದ್, ಅಸೆಂಬ್ಲಿ ಉಪಾಧ್ಯಕ್ಷ ಇರ್ಷಾದ್ ಮಾಸನಕಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
ವರದಿ:- ಸುಧೀರ್ ಕುಲಕರ್ಣಿ