Ad imageAd image

ಸಚಿವ ಸಂತೋಷ ಲಾಡ್ ಅವರಿಂದ ಪಾರದರ್ಶಕ ಬೆಳೆ ವಿಮೆ ಪರಿಹಾರಕ್ಕೆ ಚಿಂತನೆ

Bharath Vaibhav
ಸಚಿವ ಸಂತೋಷ ಲಾಡ್ ಅವರಿಂದ ಪಾರದರ್ಶಕ ಬೆಳೆ ವಿಮೆ ಪರಿಹಾರಕ್ಕೆ ಚಿಂತನೆ
WhatsApp Group Join Now
Telegram Group Join Now

ಧಾರವಾಡ :- ಪ್ರಸಕ್ತ 2024 ನೇ ಸಾಲಿನ ಬೆಳೆ ವಿಮೆ ಕುರಿತಂತೆ ಜಿಲ್ಲೆಯ ವಿವಿಧ ಭಾಗಗಳ ರೈತ ಮುಖಂಡರ ಜೊತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿಂದು ಸಭೆ ಜರುಗಿತು.

ಬೆಳೆ ಕಟಾವು, ಬೆಳೆ ಹಾನಿ, ವಿಮಾ ಕಂಪನಿಗಳ ಅವೈಜ್ಞಾನಿಕ ಪದ್ಧತಿ, ಪರಿಹಾರ ವ್ಯತ್ಯಾಸ ಕುರಿತಂತೆ ಹಲವು ರೈತ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಚಿವ ಸಂತೋಷ ಲಾಡ್ ಅವರು ಮಾತನಾಡಿ, ಬೆಳೆ ಕಟಾವು ಮಾದರಿಗಳನ್ನು ಎರಡು ಮೂರು ಪಟ್ಟು ಹೆಚ್ಚಿಸುವಲ್ಲಿ ಕ್ರಮಕೈಗೊಳ್ಳಲು ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದೆಂದರು. ಲಾಭದ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ವಿಮಾ ಕಂಪನಿಗಳು ರೈತರ ಹಿತದೃಷ್ಟಿ ಕಾಯದೇ ಕೇವಲ ಲಾಭದತ್ತ ಕಾರ್ಯ ನಿರ್ವಹಿಸುತ್ತವೆ.ಈ ಹಿನ್ನಲೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ವಿಮಾ ಕಂಪನಿಗಳಲ್ಲಿ ಬದಲಾವಣೆ ಬರಬೇಕಿದೆ. ರೈತರು ಸಹ ಇದಕ್ಕೆ ಪೂರಕವಾಗಿ ಒತ್ತಾಯ ಹಾಕಬೇಕೆಂದರು. ರಾಜ್ಯ ಹಾಗೂ ಕೇಂದ್ರ ಸರಕಾರಗಳೇ ವಿಮಾ ಕಂಪನಿಯನ್ನು ಆರಂಭಿಸಿ ಪಾರದರ್ಶಕ ಸಹಕಾರಿ ಸೊಸೈಟಿ ಮಾದರಿಯಲ್ಲಿ ವಿಮಾ ಸೊಸೈಟಿ ಆರಂಭಿಸಿ ಪರಿಹಾರ ಅನುಷ್ಠಾನಗೊಳಿಸವಲ್ಲಿ ಚರ್ಚೆ ನಡೆಯಬೇಕಿದೆಯೆಂದರು.

ಬೆಳೆಹಾನಿಯಾದಲ್ಲಿ ಸರಕಾರಿ ವಿಮಾ ಕಂಪನಿಗಳಿಂದಲೇ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದರೆಡು ದಿನಗಳಲ್ಲಿ ಅನುಭವಿ ಪರಿಣಿತ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದೆಂದು ಸಚಿವರು ತಿಳಿಸಿದರು.

ಕೆಲ ಪ್ರದೇಶಗಳಲ್ಲಿ ಒಂದೇ ತೆರನಾದ ಬೆಳೆ ಬೆಳೆಯುವಂತೆ ಹಾಗೂ ವಿಮೆ ಮಾಡಿಸುವಂತೆ ಕೆಲ ವ್ಯಕ್ತಿಗಳು ವಿಮಾ ಕಂಪನಿಗಳ ಜೊತೆಗೂಡಿ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ರೈತರು ಸಚಿವರ ಗಮನಕ್ಕೆ ತಂದರು. ಇಂಥವರ ಬಗ್ಗೆ ತೀವ್ರ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಎಚ್.ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ವೇದಿಕೆಯಲ್ಲಿ ಇದ್ದರು. ಸಭೆಯಲ್ಲಿ ಜಿಲ್ಲೆಯ ಹಲವಾರು ರೈತ ಮುಖಂಡರು ಅಭಿಪ್ರಾಯ ಹಂಚಿಕೊಂಡರು.

ವರದಿ: ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!