ಸೇಡಂ:- ತಾಲೂಕಿನ ಬಿರನಹಳ್ಳಿ ಗ್ರಾಮದಲ್ಲಿ ಹಣದಿ ರಸ್ತೆ ಮಳೆ ಬಂದಾಗ ರೈತರಿಗೆ ತುಂಬಾ ಕಷ್ಟವಾಗುತ್ತಿದೆ ಹೆಸರು ಮತ್ತು ಉದ್ದು ಹಾಲಗಿದೆ ರೈತರು ಸಂಕಷ್ಟದಲ್ಲಿದ್ದಾರೆ ಎತ್ತಿನ ಬಂಡಿ ಹೋಗಲು ಬರದೆ ರಸ್ತೆಯಲ್ಲಿ ತೊಂದರೆ ಆಗುತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯನ್ನು ಸರಿಪಡಿಸುವಂತೆ ಮನವಿಗೆ ಸ್ಪಂದಿಸುತ್ತಿಲ್ಲ.
ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮಾನ್ಯ ಕುಕ್ಕುಂದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ತಾಲೂಕ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒಂದು ತಿಂಗಳಾದರೂ ಇನ್ನೂ ಕೂಡ ಸ್ಪಂದನೆ ಕೊಡುತ್ತಿಲ್ಲ.
ಆದಷ್ಟು ಬೇಗ ಕ್ರಮ ಕೈಗೊಂಡಿಲ್ಲ ಅಂದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಪತ್ರಿಕಾ ಮತ್ತು ಮಾದ್ಯಮ ಘಟಕ ಅಧ್ಯಕ್ಷರಾದ ಗುಂಡಪ್ಪ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆಯ ಮನವಿ ಮಾಡಿದ್ದಾರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.