ಸಿಂಧನೂರು :-ರಾಯಚೂರು ಬಳ್ಳಾರಿ ಜಿಲ್ಲೆಗಳಿಂದ ಸಿಂಧನೂರು 90 ಕಿ.ಮೀ ಅಂತರದಲ್ಲಿದೆ. ಶೈಕ್ಷಣಿಕ ಆರ್ಥಿಕ ಮತ್ತು ಭೌಗೋಳಿಕವಾಗಿ ಸಿಂಧನೂರು ಪ್ರಗತಿ ಹೊಂದಿದೆ ಏಷ್ಯಾ ಖಂಡದಲ್ಲಿಯೇ ಟ್ರ್ಯಾಕ್ಟರ್ ಮಾರಾಟದಲ್ಲಿ ಮೊದಲು ಸ್ಥಾನದಲ್ಲಿದೆ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ಏಕೈಕ ತಾಲೂಕಾಗಿದೆ ಅಕ್ಕ ಪಕ್ಕದಲ್ಲಿರುವ ಸಿರುಗುಪ್ಪ. ಕಾರಟಗಿ. ಕನಕಗಿರಿ. ತಾವರಗೇರಾ. ಲಿಂಗಸುಗೂರು. ಮಸ್ಕಿ. ಆಯಾ ಜಿಲ್ಲಾ ಕೇಂದ್ರಗಳಿಂದ ದೂರದಲ್ಲಿದ್ದು ಸಿಂಧನೂರಿಗೆ ಹತ್ತಿರವಾಗುವುದರಿಂದ ಈ ಎಲ್ಲಾ ಪಟ್ಟಣಗಳನ್ನು ಸಿಂಧನೂರು ಜಿಲ್ಲಾ ಕೇಂದ್ರಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು. ಅತ್ಯಂತ ಔಚಿತ್ಯಪೂರ್ಣವಾಗಿದೆ.
ಪಕ್ಕದ ಮಸ್ಕಿ ತಾಲೂಕು ಸಿಂಧನೂರು ತಾಲೂಕಿನ ಅವಿಭಾಜ್ಯ ಅಂಗವಾಗಿದೆ ಹೀಗಾಗಿ ಸಿಂಧನೂರು ಜಿಲ್ಲಾ ಆಗುವುದಕ್ಕೆ ಯಾವುದೇ ಅಡೆತಡೆ ಬರುವುದಿಲ್ಲ ಸಿಂಧನೂರು ಜಿಲ್ಲೆಯಾಗುವದರಿಂದ ಜಿಲ್ಲಾ ಕ್ಯಾನ್ಸರ್ ಆಸ್ಪತ್ರೆ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ. ತಾಯಿ ಮಕ್ಕಳ ಆಸ್ಪತ್ರೆ. ನರ್ಸಿಂಗ್. ಪ್ಯಾರಾ ಮೆಡಿಕಲ್ ಕಾಲೇಜ್. ಕೇರ್ ಆಸ್ಪತ್ರೆ. ಸೇರಿದಂತೆ ಹಲವು ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಲಿದೆ ಜೊತೆಗೆ ಕೈಗಾರಿಕೆಗಳು ಸ್ಥಾಪನೆ ಆಗುವುದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿ ಆಗುತ್ತವೆ ಹೀಗಾಗಿ ಸಿಂಧನೂರು ಜಿಲ್ಲೆ ಯಾಗಿಸುವ ಕನಸು ನನಸಾಗಬೇಕಾಗಿದೆ.
ಸಿಂಧನೂರು ನಗರ ತಾಲೂಕಿನ ಕೇಂದ್ರವಾಗಿದ್ದು ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ ತಾಲೂಕಿನ ಹೆಚ್ಚಿನ ಕೃಷಿ ಭೂಮಿಯು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶ ವ್ಯಾಪ್ತಿ ಬರುತ್ತದೆ ಇಲ್ಲಿ ನೀರಾವರಿ ಸೌಕರ್ಯ ವರ್ಷದ ಎರಡು ಬೆಳೆಗಳಿಗೆ ಲಭ್ಯವಾಗಿದೆ ಭತ್ತ ಯಥೇಚ್ಛವಾಗಿ ಬೆಳೆಯಲಾಗುತ್ತದೆ ಆದ್ದರಿಂದ ಈ ತಾಲೂಕನ್ನು “ಭತ್ತದ ಕಣಜ” “ಬತ್ತದ ನಾಡು ‘ ಎಂದು ಕರೆಯುತ್ತಾರೆ.
2011ನೇ ಜನಗಣತಿಯ ಪ್ರಕಾರ ತಾಲೂಕಿನ ಜನಸಂಖ್ಯೆಯು ಮೂರು ಲಕ್ಷ 60, ಸಾವಿರದ. 164. ಇದ್ದು ಸಾಕ್ಷರತೆ ಪ್ರಮಾಣ ಶೇ. 50.6 ರಷ್ಟಿದೆ ತಾಲೂಕಿನ ವಿಸ್ತೀರ್ಣ 1567.70 ಕಿಲೋ ಮೀಟರ್ ಇದೆ ಸಿಂಧನೂರು ಜಿಲ್ಲಾ ಆಗೋದಕ್ಕೆ ಎಲ್ಲ ರೀತಿಯ ಅರ್ಹತೆ ಇದೆ. ಹೀಗಾಗಿ ಜಿಲ್ಲಾ ಕೇಂದ್ರಕ್ಕಾಗಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಲು – “ಕರ್ನಾಟಕ ರಕ್ಷಣಾ ವೇದಿಕೆ” (ಟಿ ಎ ನಾರಾಯಣಗೌಡ. ಬಣ ) ತಾಲೂಕ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಸಿಂಧನೂರು ಜಿಲ್ಲೆಯನ್ನಾಗಿ ಘೋಷಿಸಲು ಒತ್ತಾಯಿಸಿ. ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರಿಕೆ ಘೋಷ್ಠಿ ಮುಖಾಂತರ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕ ರ ವೇ ಪದಾಧಿಕಾರಿಗಳಾದ – ಗಂಗಣ್ಣ ಡಿಶ್. ಜಿಲ್ಲಾಧ್ಯಕ್ಷರು ರಾಯಚೂರು.. ರಾಮಕೃಷ್ಣ ಭಜಂತ್ರಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ.. ಲಕ್ಷ್ಮಣ ಬೋವಿ. ತಾಲೂಕು ಅಧ್ಯಕ್ಷರು ಸಿಂಧನೂರು.. ದೇವೇಂದ್ರ ಗೌಡ. ಜಿಲ್ಲಾ ಉಪಾಧ್ಯಕ್ಷರು.. ಎಸ್. ಎಸ್.ಪಾಷಾ ಜಿಲ್ಲಾ ಮುಖಂಡರು. ಇನ್ನು ಅನೇಕರು ಇದ್ದರು.
ವರದಿ :- ಬಸವರಾಜ ಬುಕ್ಕನಹಟ್ಟಿ