ಮುಂಬೈ : ದೇಶದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆಯಾಗಲಿದೆ. ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಶುಕ್ರವಾರ ನಿರ್ಧರಿಸಿದೆ.
ಈ ನಿರ್ಧಾರದಿಂದ ದೇಶದಲ್ಲಿ ತಾಳೆ ಎಣ್ಣೆ, ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಬೆಲೆ ಏರಿಕೆಯಾಗಲಿದೆ.ಇಲ್ಲಿಯವರೆಗೆ ಕಚ್ಚಾ ಸೋಯಾ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಗಳ ಮೇಲೆ ಯಾವುದೇ ಕಸ್ಟಮ್ಸ್ ಸುಂಕ ಇರಲಿಲ್ಲ. ಈಗ 20 ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಲಾಗಿದೆ.
ಈ ಹಿಂದೆ, ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲೆ 12.5 ಪ್ರತಿಶತದಷ್ಟು ಆಮದು ಸುಂಕವಿತ್ತು. ಈಗ ಇವುಗಳ ಮೇಲೆ ಶೇ.32.5ರಷ್ಟು ಆಮದು ಸುಂಕ ವಿಧಿಸಲಾಗುವುದು.
ಒಟ್ಟಾರೆಯಾಗಿ, ಕಚ್ಚಾ ತೈಲದ ಮೇಲಿನ ಸುಂಕವು ಶೇಕಡಾ 5.5 ರಿಂದ ಶೇಕಡಾ 27.5 ಕ್ಕೆ ಮತ್ತು ಸಂಸ್ಕರಿಸಿದ ತೈಲದ ಮೇಲಿನ ಸುಂಕವು ಶೇಕಡಾ 13.75 ರಿಂದ ಶೇಕಡಾ 35.75 ಕ್ಕೆ ಏರಿಕೆಯಾಗಲಿದೆ.
ಇದು ಸೆಪ್ಟೆಂಬರ್ 14 ರಿಂದ ಜಾರಿಗೆ ಬರಲಿದೆ. ಸರಕಾರದ ನಿರ್ಧಾರದಿಂದ ಈ ತೈಲಗಳ ಬೆಲೆಯಲ್ಲಿ ಹೆಚ್ಚಳವಾಗಲಿದ್ದು, ಬೇಡಿಕೆ ಕಡಿಮೆಯಾಗಲಿದೆ. ಮತ್ತೊಂದೆಡೆ, ಕೇಂದ್ರವು ಈರುಳ್ಳಿ ಮೇಲಿನ ರಫ್ತು ಸುಂಕವನ್ನು ಶೇಕಡಾ 40 ರಿಂದ 20 ಕ್ಕೆ ಇಳಿಸಿದೆ.