Ad imageAd image

ಪ್ರಜಾಪ್ರಭುತ್ವದ ಆಶಯಗಳನ್ನು ತಿಳಿಸುವುದೆ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ ಅಭಿಮತ

Bharath Vaibhav
ಪ್ರಜಾಪ್ರಭುತ್ವದ ಆಶಯಗಳನ್ನು ತಿಳಿಸುವುದೆ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ ಅಭಿಮತ
WhatsApp Group Join Now
Telegram Group Join Now

ಮೊಳಕಾಲ್ಮೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನ ಬದ್ಧವಾದ ಆಶಯಗಳನ್ನು ಸಾರ್ವಜನಿಕರಿಗೆ ತಿಳಿಸುವ ಮತ್ತು ಅವುಗಳನ್ನು ಪಾಲಿಸುವ ಪ್ರಮುಖ ಅಂಶಗಳನ್ನು ತಿಳಿಸುವ ಮಹತ್ವಪೂರ್ಣವಾದ ಕಾರ್ಯಕ್ರಮವೇ ಪ್ರಜಾಪ್ರಭುತ್ವ ಮಾನವ ಸರ್ಪಳಿ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು

ಮೊಳಕಾಲ್ಮೂರು ತಾಲೂಕಿನ ಮೇಲಿನ ಕಣಿವೆ ಗ್ರಾಮದಿಂದ ಹಿರಿಯೂರು ತಾಲೂಕಿನ ಜವೆಗೊಂಡನಹಳ್ಳಿಯ ವರೆಗೂ ತಾಲೂಕ ಆಡಳಿತ ಮತ್ತು ಜಿಲ್ಲಾಡಳಿತದ ವತಿಯಿಂದ ಅಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮವು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್ ಸಿ ಮಹದೇವಪ್ಪ ರವರ ಆಶಯದಂತೆ ರಾಜ್ಯ ಸರ್ಕಾರದ ವತಿಯಿಂದ ಬೀದರ್ ನಿಂದ ಚಾಮರಾಜನಗರದವರೆಗೂ ಹಮ್ಮಿಕೊಂಡಿರುವ ಅತ್ಯಂತ ಮಹತ್ವಪೂರ್ಣವಾದ ಮಾನವ ಸರಪಳಿ ಕಾರ್ಯಕ್ರಮವಾಗಿದ್ದು ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳಾದ ಸಾರ್ವಭೌಮ ಪ್ರಜಾಸತಾತ್ಮಕ ಪ್ರಜಾ ರಾಜ್ಯದ ಭಾತೃತ್ವ ಸಮಾನತೆ ಸ್ವಾತಂತ್ರ ತತ್ವ ಸಿದ್ಧಾಂತಗಳನ್ನು ಸಾರ್ವಜನಿಕರ ಬದುಕಿಗೆ ಅಳವಡಿಸಿಕೊಳ್ಳುವುದು ಮತ್ತು ದೇಶದ ಸಂವಿಧಾನಬದ್ಧವಾದ ತತ್ವ ಸಿದ್ಧಾಂತಗಳನ್ನು ಸಂರಕ್ಷಿಸುವುದು ಮತ್ತು ಪಾಲಿಸುವುದು ತಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿ

ರಾಜ ಸರ್ಕಾರದ ಮಹದಾಶೆಯ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂದ ಗೌರವವಾಗಿದೆ ಎಂದು ತಿಳಿಸಿದರು

ಸಂವಿಧಾನ ಬದ್ಧವಾದ ಆಶಯಗಳನ್ನು ಭಾರತೀಯ ಪ್ರಜೆಗಳಾದ ನಾವೆಲ್ಲರೂ ಪಾಲಿಸುವುದು ಮತ್ತು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಪ್ರತಿಯೊಬ್ಬ ನಾಗರಿಕನು ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನ ಬದ್ಧ ಆಶಯಗಳನ್ನು ಪಡೆಯುವ ಮೂಲಕ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಧಾರ್ಮಿಕವಾಗಿ ಆರ್ಥಿಕವಾಗಿ ಮತ್ತು ಭೌತಿಕವಾಗಿ ಸಮಾನವಾದ ಅವಕಾಶಗಳನ್ನು ಪಡೆದು ಸ್ವತಂತ್ರ ಒಕ್ಕೂಟ ವ್ಯವಸ್ಥೆಯ ಸಂವಿಧಾನ ಬದ್ಧ ತತ್ವ ಸಿದ್ಧಾಂತಗಳೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳಬೇಕಾಗಿ ಎಂದು ತಿಳಿಸಿದರು

ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿಸಲು ಸಾರ್ವಜನಿಕರ ಪಾಲ್ಗೊಳ್ಳಿಗೆ ಅತ್ಯಂತ ಮಹತ್ವಪೂರ್ಣದಾಗಿದ್ದು ಇಂಥ ಮಹತ್ತರ ಕಾರ್ಯದಲ್ಲಿ ಸ್ವ ಇಚ್ಛೆಯ ಮೇರೆಗೆ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದ ಯಶಸ್ವಿಗೆ ಭಾಗಿಯಾಗಿ ಶ್ರಮಿಸಿರುವುದು ಅತ್ಯಂತ ಮಹತ್ವಪೂರ್ಣವಾದ ಸಂವಿಧಾನ ಪಾಲನೆಯ ಸಂದೇಶವನ್ನು ನೀಡಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಉಪವಿಭಾಗಾಧಿಕಾರಿಯಾದ ಕಾರ್ತಿಕ್ ರವರು ಮಾತನಾಡಿ ಮೊಳಕಾಲ್ಮೂರು ತಾಲೂಕು ಅತಿ ಉದ್ದನೆಯ ಮಾರ್ಗವನ್ನು ಹೊಂದಿದ್ದರು ಸಹ ಸಾರ್ವಜನಿಕರ ಉತ್ತಮ ಪಾಲ್ಗೊಳ್ಳುವಿಕೆಯಿಂದ ಯಶಸ್ವಿ ಕಾರ್ಯಕ್ರಮಕ್ಕೆ ಮಾದರಿಯಾಗಿದ್ದು ಸಾರ್ವಜನಿಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಕರಡಿ ಭೂತರಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.

ಯಾವುದೇ ಕಾರ್ಯಕ್ರಮವು ಯಶಸ್ವಿ ಕಾರ್ಯಕ್ರಮವಾಗಬೇಕಾದರೆ ಕಾರ್ಯಕ್ರಮದ ಮೂಲ ಆಸೆಗಳು ಮತ್ತು ತತ್ವ ಸಿದ್ಧಾಂತಗಳು ಪ್ರತಿಯೊಬ್ಬ ನಾಗರಿಕರಿಗೆ ತಿಳಿಯುವಂತಾಗಿರಬೇಕು ಮತ್ತು ಅಂತಹ ಅಮೂಲ್ಯವಾದ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬ ನಾಗರಿಕರು ಪಾಲಿಸುವ ಮೂಲಕ ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಆಶಯಗಳ ರಕ್ಷಣೆ ಮತ್ತು ಪಾಲನೆ ಯೊಂದಿಗೆ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು

ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನ ಬದ್ಧ ಆಶಯಗಳನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳುವ ಮೂಲಕ ತಮ್ಮ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ರಕ್ಷಣೆ ಮತ್ತು ಪಾಲನೆ ಯೊಂದಿಗೆ ಮಾತ್ರೆ ಎಂದು ಯಶಸ್ವಿ ಕಾರ್ಯಕ್ರಮ ನೆರವೇರಿಸಲು ಸಾಧ್ಯ ಅಂತಹ ನಿಟ್ಟಿನಲ್ಲಿ ತಾಲೂಕಿನ ಜನತೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ಕಾರಣ ಭೂತರಗಿರುವುದು ಅತ್ಯಂತ ಹೆಮ್ಮೆಯ ಸಂಗತಿ

ಸಂದರ್ಭದಲ್ಲಿ ತಹಶೀಲ್ದಾರ್ ಟಿ ಜಗದೀಶ್ ಇ ಓ ಹನುಮಂತಪ್ಪ ಸಿಪಿಐ ವಸಂತ ಅಸೋದೆ ಪಿಎಸ್ಐ ಪಾಂಡುರಂಗಪ್ಪ ಮಹೇಶ್ ಹೊಸಪೇಟೆ ಆರ್‌ಎಫ್‌ಒ ಶ್ರೀ ಹರ್ಷ ಬಾಬು ಟಿ ಡಿ ಪಿ ಓ ನವೀನ್ ಕುಮಾರ್ ಟಿಎಚ್ಒ ಮಧುಕುಮಾರ್ ಟಿಎಸ್‌ಡಬ್ಲ್ಯೂ ನಾಸೀರ್ ಹುಸೇನ್ ಗುರುಸಿದ್ದಪ್ಪ ಹಾಲೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸುಭಾನ್ ಸಾಬ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿಕೆ ಕಲೀಮುಲ್ಲಾ ಪಟ್ಟಣ ಪಂಚಾಯಿತಿ ಸದಸ್ಯರಾದ ಎಸ್ ಖಾದರ್ ಅಬ್ದುಲ್ಲ ಜಿ ಪ್ರಕಾಶ್ ಜಿಯಾವುಲ್ಲಾ ಮುಂತಾದವರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!