Ad imageAd image

ಪೆದ್ದೂರೂ : ಟೆಂಪೋ, ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಸವಾರ ಮೃತ್ಯು

Bharath Vaibhav
ಪೆದ್ದೂರೂ : ಟೆಂಪೋ, ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಸವಾರ ಮೃತ್ಯು
WhatsApp Group Join Now
Telegram Group Join Now

ಚೇಳೂರು : ಟೆಂಪೋವೊಂದು ದ್ವಿಚಕ್ರ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಾಯಗೊಂಡ ಘಟನೆ ನಲ್ಲಗುಟ್ಲಪಲ್ಲಿ ಗ್ರಾಂ ಪಂಚಾಯತಿ ಸಮೀಪ ಪೆದ್ದೂರೂ ಗ್ರಾಮದ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ತಾಲೂಕಿನ ನಲ್ಲಗುಟ್ಲಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಂಡ್ಲಪಲ್ಲಿ ಗ್ರಾಮದ ಗಣೇಶ(23) ತಂದೆ ವೆಂಕಟರವಣಪ್ಪ ಎಂದು ಗುರುತಿಸಲಾಗಿದೆ. ಈತನೊಂದಿಗೆ ಪ್ರಯಾಣಿಸುತ್ತಿದ್ದ ಅದೇ ಗ್ರಾಮದ ನಾಗಾರ್ಜುನ (25) ಗಾಯಗೊಂಡಿದ್ದು, ಈತನನ್ನು ಪ್ರಥಮ ಚಿಕಿತ್ಸೆಗಾಗಿ ಚೇಳೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ದ್ವಿಚಕ್ರ ವಾಹನ ಸವಾರರು ಗುಂಡ್ಲಪಲ್ಲಿ ಗ್ರಾಮದಿಂದ ಪಾಳ್ಯಕೆರೆ ಮಾರ್ಗದಲ್ಲಿ ತೆರಳುತ್ತಿದ್ದು,ಚಿಂತಾಮಣಿ ಕಡೆಯಿಂದ ಟೆಂಪೋವೊಂದನ್ನು ಚಾಲಕ ರಮೇಶ್ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿದ್ದು, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಟೆಂಪೋವು ಪೆದ್ದೂರೂ ಕಡೆಯಿಂದ ಪಾಳ್ಯಕೆರೆ ಕಡೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ದ್ವಿಚಕ್ರ ಸವಾರ ಗಣೇಶ್(23) ಎಂಬಾತಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಸಹ ಸವಾರನಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ವ್ಯಕ್ತಿಯನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು.ಈ ಕುರಿತು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!