ಬೆಳಗಾವಿ : ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ, ಅವನಿನ್ನು ಜೂನಿಯರ್ ಆಗಿದ್ದು, ಅವನಿಗೆ ಏನು ಸಿದ್ಧಾಂತ ಗೊತ್ತಿದೆ ಎಂದು ಬಿಜೆಪಿಯ ಬಂಡಾಯ ಬಣದ ಶಾಸಕ ರಮೇಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರೊಂದಿಗೆ ಇತ್ತೀಚೆಗೆ RSS ಸಂಘಟನೆ ಸಭೆ ನಡೆಸಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ತಪ್ಪು ಮಾಡಿದವರ ವಿರುದ್ಧ ಸಭೆಯಲ್ಲಿ ಹಿರಯರು ಬೈದಿದ್ದು, ಎಲ್ಲವನ್ನೂ ಹೇಳಲು ಆಗಲ್ಲ.
ಆದರೆ ಪಕ್ಷದ ಮುಂದಿನ ಅಧ್ಯಕ್ಷ ಯಾರು ಎಂಬುವುದು ವರಿಷ್ಠರು ತೀರ್ಮಾನ ಮಾಡಬೇಕು ಎಂಬ ಚರ್ಚೆಯಾಗಿದೆ ಎಂದಿದ್ದಾರೆ. ವಿಜಯೇಂದ್ರ ಅಧ್ಯಕ್ಷ ಸ್ಥಾನ ನಾವು ಒಪ್ಪಲ್ಲ, ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ತಾವು ಯಡಿಯೂರಪ್ಪ ಅವರ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಅವರಿಗೆ ವಯಸ್ಸಾಯ್ತು ವಿಶ್ರಾಂತಿ ಅಗತ್ಯವಿದೆ. ವಿಜಯೇಂದ್ರ ನಾಯಕತ್ವ ನಾವು ಒಪ್ಪಲು ಸಾಧ್ಯವೇ ಇಲ್ಲ ಎಂದು ಮತ್ತೊಮ್ಮೆ ರಮೇಶ್ ಸ್ಪಷ್ಟಪಡಿಸಿದ್ದಾರೆ.