ಹಾವೇರಿ:-ರಾಜು ಕುನ್ನೂರ ಜನ್ಮದಿನ ಪ್ರಯುಕ್ತ ಶಿಗ್ಗಾಂವಿಯ ಹನುಮಂತಗೌಡ್ರ ಪಾಟೀಲ ಕಲ್ಯಾಣ ಮಂಟಪದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್.ಎಸ.ಎಲ್.ಸಿ.ಹಾಗು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಗಿದೆ. ಈ ಸಮಾರಂಭದಲ್ಲಿ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಜೂನಿಯರ ರಾಜಕುಮಾರ್ ಮತ್ತು ಜೂನಿಯರ ಪುನೀತ ರಾಜಕುಮಾರ್ ಅವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಬಂಕಾಪೂರದ ರೇಶಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶಿಗ್ಗಾಂವಿ ಇಸ್ಲಾಂ ಧರ್ಮದ ಮುಖಂಡರಾದ ಹಜರತ ಮೌಲಾನಾ ಸೈಯದ ಶಬ್ಬೀರ ಅಹ್ಮದ ಅಶರಪೀ ಶುಭ ಕೋರಿದರು.ಕಾಯ೯ಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ.ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗಂಜಿಗಟ್ಟಿ,ರಾಜು ಕುನ್ನೂರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುಳನ್ನು ಕೋರಿ ಅವರು ಇನ್ನು ಅನೇಕ ಸಮಾಜ ಸೇವೆಗಳನ್ನು ಮಾಡಲಿ ಎಂದು ನುಡಿದರು.
ಈ ಕಾಯ೯ಕ್ರಮದ ಆಶಯ ನುಡಿಗಳನ್ನು ನುಡಿದ ರಾಜು.ಮ.ಕುನ್ನೂರ ಅವರು ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಹಾಗು ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಸಾಧನೆ ಮಾಡಬೇಕು ಮತ್ತು ರಂಗಭೂಮಿ ಬೇಳೆಯ ಬೇಕು ಎಂದು ಮಾತಾಡಿದರು ಕಾಯ೯ಕ್ರಮದ ಅಧ್ಯಕ್ಷರಾಗಿ ಮಂಜುನಾಥ ಕುನ್ನೂರ ಅವರು ತಾವು ಮಾಡಿದ ಸಾದನೆಯ ಬಗ್ಗೆ ಹಾಗು ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿ ಬಗ್ಗೇ ಮಾತನಾಡಿದರು ಕಾಯ೯ಕ್ರಮದ ಪ್ರಾಸ್ತಾವಿಕವಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ.N.G.ದ್ಯಾಮನಕೋಪ್ಪ ಮಾತನಾಡಿದರು.
ಸ್ವಾಗತ ಕಾಯ೯ಕ್ರಮವನ್ನು ಕೆ.ಬಸಣ್ಣ ಹಾಗೂ ನಿರೂಪಣೆ.ಕೆ.ಜಿ.ಮಲ್ಲೂರ ಅಸ್ಮಾ ಕಲಾಯಗಾರ ಹಾಗೂ ವಂದನಾರ್ಪಣೆ. ಕೆ ಎಸ್ ಬರದೇಲಿ ಸರ್ ನಡೆಸಿದರು.ಕಾಯ೯ಕ್ರಮದಲ್ಲಿ ಚನ್ನಬಸವೇಶ್ವರ ಗ್ರಾಮೀಣ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಮಂಜುನಾಥ್ ಬ್ಯಾಳಿ. ಶಿಗ್ಗಾಂವಿಯ ವಿವದ ಸಮಾಜ ಮುಂಡರು ಹಾಗೂ ಸಮಸ್ತ ಸಾವ೯ಜನಿಗರು ಸಿಬ್ಬಂದಿವಗ೯ದವರು ಹಾಗು ವಿದ್ಯಾರ್ಥಿಗಳು ಕಾಯ೯ಕ್ರಮವದಲ್ಲಿ ಭಾಗವಹಿಸಿದ್ದರು…
ರಮೇಶ್ ತಾಳಿಕೋಟಿ