ಸಿಂಧನೂರು :- ತಾಲೂಕಿನ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಆಕ್ರಮ ಮಧ್ಯ ಮಾರಾಟ ಜೋರಾಗಿದೆ ಗ್ರಾಮೀಣ ಭಾಗದ ಸಣ್ಣಪುಟ್ಟ ಟೀ.. ಅಂಗಡಿ. ಡಬ್ಬ ಅಂಗಡಿ. ಸೇರಿದಂತೆ ಹಲವು ಮನೆ ಮಳಿಗಳಲ್ಲೂ ಬಹಿರಂಗವಾಗಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯ ಬೆಲೆ ಇಲ್ಲದೆ ಜನರು ಆರ್ಥಿಕ ಸಂಕಷ್ಟದಲ್ಲಿದ್ದರು ಗ್ರಾಮೀಣ ಭಾಗದ ಗ್ರಾಮಗಳಲ್ಲಿ ಸುಲಭವಾಗಿ ಸಿಗುವ ಮಧ್ಯ ಸೇವನೆಯಿಂದ ಕೆಲವರು ಚಟಕ್ಕೆ ಬಿದ್ದು ಹಾಳಾಗಿದ್ದಾರೆ ಗ್ರಾಮೀಣ ಭಾಗದ ಕೆಲವು ಗೂಡಂಗಡಿ. ಸಣ್ಣ ಪುಟ್ಟ ಮಾಂಸಾಹಾರಿ ಹೋಟೆಲ್ಗಳು.
ಕೆಲವರು ಮನೆಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಎಥೇಚ್ಛವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ ಹಳ್ಳಿಗಳಲ್ಲಿ ರಾಜಾರೋಷವಾಗಿ ಆಕ್ರಮ ಮಧ್ಯ ಮಾರಾಟ ದಂಧೆಗೆ ನಗರದ ಬಾರ್ ಮಾಲೀಕರೇ.. ಚೀಲಗಟ್ಟಲೆ ಹಾಗೂ ಬಾಕ್ಸ್ ಕಟ್ಟಲೆ ಆಟೋದ ಮೂಲಕ ಅಥವಾ ಬೈಕುಗಳ ಮೂಲಕ ಅಂಗಡಿಗಳಿಗೆ. ಮನೆ ಮನೆಗೆ ಸಂಚಾರಿ ವ್ಯವಸ್ಥೆ ಮಾಡಿಕೊಡುತ್ತಾರೇ ಆಕ್ರಮ ಮಧ್ಯ ಮಾರಾಟ ದಂಧೆ ಕಣ್ಣಿಗೆ ಕಾಣುತ್ತಿದ್ದರು ತಮಗೆ ಏನು ಗೊತ್ತಿಲ್ಲದಂತೆ ಅಬಕಾರಿ ಅಧಿಕಾರಿಗಳು. ಪೋಲಿಸ್ ಇಲಾಖೆ. ಜನ ಪ್ರತಿನಿಧಿಗಳು. ಕಣ್ಮುಚ್ಚಿ ಕುಳಿತಿರುವುದು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.
ದಿನವಿಡೀ ದುಡಿಯುವ ಶ್ರಮಿಕ ವರ್ಗದ ಬಹುತೇಕರು ಕೂಲಿ ಹಣದಲ್ಲಿ ಅರ್ಧದಷ್ಟು ಮಧ್ಯ ಸೇವನೆಗೆ ಖರ್ಚು ಮಾಡುತ್ತಾರೆ ಅಂಥವರ ಕುಟುಂಬಗಳು ಬೀದಿಗೆ ಬೀಳುವುದು ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಕುತ್ತು ಒದುಗುತ್ತದೆ ಕುಡಿದ ಚಟಕ್ಕೆ ಸಾಲ ಮಾಡುವುದು ಇಲ್ಲವೇ ಕಳ್ಳತನಕ್ಕೆ ಇಳಿಯುವಂತ ಸಂಭಾವವನ್ನು ಅಲ್ಲಗಳವಂತಿಲ್ಲ ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಆಕ್ರಮ ಮಧ್ಯ ಮಾರಾಟ ದಂಧೆಗೆ ಕಡಿವಾಣ ಹಾಕಬೇಕೆಂದು.
ಕರ್ನಾಟಕ ರೈತ ಸಂಘ. ಹಾಗೂ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘ ” ಸಿಂಧನೂರು ತಸಿಲ್ದಾರ್ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಅವರಿಗೆ ಮನವಿ ಸಲ್ಲಿಸಿದರು.. ಈ ಸಂದರ್ಭದಲ್ಲಿ – ಚಿಟ್ಟಿಬಾಬು. ಬೂದಿವಾಳ ಕ್ಯಾಂಪ್.. ಬಿ. ಎನ್. ಯರದಿಹಾಳ.. ರಮೇಶ್ ಪಟೇಲ್ ಬೆರ್ಗಿ.. ಮರಿಯಮ್ಮ ಬಸಾಪುರ್.. ದ್ಯಾವಮ್ಮ.. ಮಲ್ಲೇಶಗೌಡ ಕನ್ನಾರಿ.. ಬಾಲಾಜಿ ಉದ್ಬಾಳ್.. ಉಮೇಶ್.. ಶಾಮಿದ್ ಸಾಬ್.. ಯಂಕಪ್ಪ.. ಶಿವಮ್ಮ ಉದ್ಬಾಳ್.. ಈರಮ್ಮ.. ನಾಗಮ್ಮ ಬುದಿವಾಳ ಕ್ಯಾಂಪ್.. ಹೊಳೆಯಮ್ಮ..ಶಾಂತಮ್ಮ.. ರೋಶನ್ ಬೇಗ್.. ಇನ್ನು ಅನೇಕರು ಇದ್ದರು.
ವರದಿ :- ಬಸವರಾಜ ಬುಕ್ಕನಹಟ್ಟಿ