ನವದೆಹಲಿ: ಚಂದ್ರಯಾನ-3 ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಭಾರತ ಇದೀಗ ಚಂದ್ರಯಾನ-4ಗೆ ಸಿದ್ಧತೆ ಆರಂಭಿಸಲಿದೆ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಿ, ನಂತರ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಯೋಜನೆಗೆ ಬೇಕಾದ ಅಗತ್ಯ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮೂನ್ ಮಿಷನ್ “ಚಂದ್ರಯಾನ-4″ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
2040ರ ವೇಳೆಗೆ ಚಂದ್ರಯಾನ-4 ಮಿಷನ್ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲು ಮತ್ತು ಸುರಕ್ಷಿತವಾಗಿ ಭೂಮಿಗೆ ಕರೆತರಲು ಮೂಲಭೂತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಈ ಮಹತ್ತರ ಯೋಜನೆಯ ಜವಾಬ್ದಾರಿಯನ್ನು ಇಸ್ರೋ ನಿಭಾಯಿಸಲಿದ್ದು, ಇದಕ್ಕೆ ಬೇಕಾದ ಅಗತ್ಯ ನೆರವನ್ನು ಒದಗಿಸಲು ಸರ್ಕಾರ ಸಮ್ಮಿತಿಸಿದೆ. ಈ ವಿಚಾರಕ್ಕೆ ಇಂದು ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನೂ ನೀಡಿದೆ
“ಚಂದ್ರಯಾನ-4” ಗೆ ಒಟ್ಟು 2,104.06 ಕೋಟಿ ರೂಪಾಯಿ ಅವಶ್ಯಕತೆ ಇದ್ದು, “ಡಾಕಿಂಗ್ / ಅನ್‌ಡಾಕಿಂಗ್, ಲ್ಯಾಂಡಿಂಗ್ ಸೇರಿದಂತೆ ಭೂಮಿಗೆ ಸುರಕ್ಷಿತವಾಗಿ ಮರಳಲು ಮತ್ತು ಚಂದ್ರನ ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆಯನ್ನು ಸಾಧಿಸಲು ಅಗತ್ಯವಿರುವ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ .