Ad imageAd image

ರಥಕ್ಕೆ ಮೇಲು ವಸ್ತ್ರ ಹೊದಿಸುವ ವೇಳೆ ಕಾಲು ಜಾರಿ ಬಿದ್ದು ಪೂಜಾರಿ ಸಾವು 

Bharath Vaibhav
ರಥಕ್ಕೆ ಮೇಲು ವಸ್ತ್ರ ಹೊದಿಸುವ ವೇಳೆ ಕಾಲು ಜಾರಿ ಬಿದ್ದು ಪೂಜಾರಿ ಸಾವು 
WhatsApp Group Join Now
Telegram Group Join Now

ಬಾಗಲಕೋಟೆ: ರಥೋತ್ಸವ ಮುಗಿದ ನಂತರ ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುವ ವೇಳೆ ಕಾಲು ಜಾರಿ ರಥದ ಮೇಲಿಂದ ಬಿದ್ದು ಪೂಜಾರಿ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಘಟನೆ ನಡೆದಿದೆ. ತಿಪ್ಪಯ್ಯ ಗಿರಿಮಲ್ಲಯ್ಯ ಪೂಜಾರಿ(53) ಮೃತಪಟ್ಟವರು.ಶ್ರಾವಣದಲ್ಲಿ ರಥೋತ್ಸವ ಮುಗಿದು ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುವ ವೇಳೆ ಘಟನೆ ನಡೆದಿದೆ.

ರಥಕ್ಕೆ ಧೂಳು ಹಿಡಿಯಬಾರದು ಎಂಬ ಉದ್ದೇಶದಿಂದ ಮೇಲು ವಸ್ತ್ರ ಹೊದಿಸಲಾಗುತ್ತದೆ. ರಥದ ಮೇಲೆ ಹತ್ತಿ ಹೊದಿಕೆ ಹಾಕುವ ವೇಳೆ ತಿಪ್ಪಯ್ಯ ಏಕಾಏಕಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!