ಹುಬ್ಬಳ್ಳಿ:-ನಗರದ ಮಂಟೂರ ರಸ್ತೆಯ ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲು ಶಾಸಕ ಪ್ರಸಾದ್ ಅಬ್ಬಯ್ಯ ಮುಂದಾಗಿದ್ದು, ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಅವರ ಜೊತೆಗೆ ಶ್ರೀರಾಮ ಸೇನೆ ಇದ್ದು, ಈ ನಿಟ್ಟಿನಲ್ಲಿ ಇಂದಿರಾ ಕ್ಯಾಂಟಿನ್ ತೆರವಿಗೆ ಸೆ. ೨೫ ರೊಳಗಾಗಿ ಗಡವು ನೀಡಲಾಗಿದ್ದು, ತೆರವುಗೊಳಿಸದೆ ಹೋದರೆ ಸೆ. ೨೬ ರಂದು ನಗರದ ಡಾ. ಅಂಬೇಡ್ಕರ್ ಅವರ ಪುತ್ಥಳಿಯಿಂದ ಪ್ರತಿಭಟನಾ ರ್ಯಾಲಿ ಮೂಲಕ ಆ ಸ್ಮಶಾನಕ್ಕೆ ಸಲಿಕೆ, ಗುದ್ದಲಿ, ಪಿಕಾಸಿ ತಗೆದುಕೊಂಡು ಹೋಗಿ ತೆರವು ಮಾಡಲಾಗುವುದು ಶ್ರೀರಾಮ ಸೇನಾ ರಾಜ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಸ್ಮಶಾನದಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಎಂದು ಕೋರ್ಟ್ ಆದೇಶ ನೀಡಿದೆ. ೮ ಏಕರೆ ನುಗ್ಗಲು ಹೊರಟಾಗ ತಡೆದಿದ್ದೇವೆ. ಹೀಗಾಗಿ ಯಾವುದೇ ಸ್ಥಿತಿಯಲ್ಲಿಯೂ ನಾವು ಇಂದಿರಾ ಕ್ಯಾಂಟಿನ್ ಮುಂದುವರೆಯಲು ಬಿಡೋಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಅವರು ಗೋಷ್ಠಿಯಲ್ಲಿ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಏಕ ವಚನದಲ್ಲಿ ಮಾತನಾಡಿದ್ದು ಖಂಡನೀಯ, ಹಿಂದೂತ್ವ ಹೋರಾಟಗಾರರು, ಹಿರಿಯರಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಶಾಸಕರಾಗಿ ಅಬ್ಬಯ್ಯ ಅವರಿಗೆ ಸಾಮಾನ್ಯ ಜ್ಞಾನವಿಲ್ಲ. ಅಬ್ಬಯ್ಯ ಅವರು ಕ್ಷಮೆಯಾಚಿಸದೇ ಹೋದರೆ ಮುಂದಿನ ದಿನಗಳಲ್ಲಿ ನೀವು ಎಲ್ಲಿ ಹೋಗುತ್ತಿರೋ ಅಲ್ಲಿ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
೫೦ ವರ್ಷದಿಂದ ಅವರು ಇಡೀ ದೇಶವನ್ನು ಜೋಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇಂತಹ ಉದ್ಧಟತನ ಹೇಳಿಕೆ ಹೇಳುವ ನೀವು ದಲಿತರ ಮೇಲೆ ಕಾಳಜಿಯಿದ್ದರೆ ನಿಮ್ಮದೆ ಸರ್ಕಾರದಲ್ಲಿ ವಾಲ್ಮೀಕಿ ಹಗರಣವಾಗಿದೆ. ನಿಮ್ಮದೇ ಕ್ಷೇತ್ರದಲ್ಲಿ ನೇಹಾ ಹಾಗೂ ಅಂಜಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಇನ್ನೂ ದೊರೆತ್ತಿಲ್ಲ. ಏಕೆ ಧ್ವನಿ ಎತ್ತಿಲ್ಲ. ಬಾಯಲಿ ಏನು ಕಡಬು ಇಟ್ಟುಕೊಂಡಿದ್ದೀರಿ ಏನು? ನಮಗೆ ಸವಾಲ್ ಹಾಕತ್ತಿರಾ? ನಾವು ಸವಾಲ್ ಗೆ ಸಿದ್ದ ಇದ್ದೇವೆ ಬನ್ನಿ ಎಂದು ಸವಾಲ್ ಎಸೆದರು.
ಪತ್ರಿಕಾಗೋಷ್ಠಿಯಲ್ಲಿ ಮಹೇಶ ಲೋಕಡೆ, ಅಣ್ಣಪ್ಪ ದಿವಟಿಗಿ, ಮಂಜುನಾಥ ಕಾಟಕರ, ಗುಣಧರ ಉಪಸ್ಥಿತರಿದ್ದರು.
ವರದಿ:- ಸುಧೀರ್ ಕುಲಕರ್ಣಿ