ಔರಾದ: -ಔರಾದ್ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಬೀದರ್ ಘಟಕದ ವತಿಯಿಂದ ಔರಾದ್ ಮತ್ತು ಕಮಲಗರ್ ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಘಟಕ ರಚನೆ ಮಾಡಲಾಯಿತು ಔರಾದ್ ತಾಲೂಕಿನ ಅಧ್ಯಕ್ಷರಾಗಿ ಯಶಪ್ಪಾ ಶೇಂಬೆಳ್ಳಿ.ಪ್ರಧಾನ ಕಾರ್ಯದರ್ಶಿಯಾಗಿ ಆನಂದ್ ಶೇಂಬೆಳ್ಳಿ.ಉಪಾಧ್ಯಕ್ಷರಾಗಿ ರಾಮಣ್ಣ ಲಾಧಾ. ಗೌರವಾಧ್ಯಕ್ಷರಾಗಿ ವೆಂಕಟರಾವ್ ಪಾಟೀಲ್ ಚಿಕ್ಲಿ. ಯುವ ಘಟಕದ ಅಧ್ಯಕ್ಷರಾಗಿ ಶಾಲಿವಾನ್ ಸೂರ್ಯವಂಶಿ. ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ದಾವಿದ್. ಹಾಗೂ ಕಮನಗರ ತಾಲೂಕಿನ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಅಧ್ಯಕ್ಷರಾಗಿ ವಿಶಾಲ ರವರನ್ನು ನೇಮಕ ಮಾಡಲಾಯಿತು.
ಇನ್ನು ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿ ದಾಸ್ ಕೆಂಪೇನೂರ್ ಮಾತನಾಡಿ ಈ ಸಂಘಟನೆ ರಚನೆ ಮಾಡಲು ಮುಖ್ಯ ಉದ್ದೇಶ ಕಲ್ಯಾಣ ಕರ್ನಾಟಕದ ಗಡಿ ಭಾಗದಲ್ಲಿ ನಮ್ಮ ಕನ್ನಡದ ನಾಡ ನುಡಿ ನೆಲ ಜಲ ಸಾಹಿತ್ಯ ಸಂಸ್ಕೃತಿ ಆಚಾರ-ವಿಚಾರಗಳ ಉಳಿವಿಗೆ ಸದಾಬದ್ದರು ಮತ್ತು ನಮ್ಮ ಭಾಗಕ್ಕೆ ಬಂದಿರುವ ಯೋಜನೆಗಳು ಜನರಿಗೆ ಸಮರ್ಪಕವಾಗಿ ಮುಟ್ಟಬೇಕು ಕನ್ನಡದ ಉಳಿವಿಗಾಗಿ ಸರ್ಕಾರದ ಆದೇಶದಂತೆ ಕಚೇರಿಗಳಲ್ಲಿ ಶೇಕಡ 60ರಷ್ಟು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕಗಳು ಅಳವಡಿಸಬೇಕು ಅಂದಾಗ ಮಾತ್ರ ನಮ್ಮ ಕನ್ನಡ ಭಾಷೆ ಉಳಿಯುತ್ತೆ ಆದ್ದರಿಂದ ಈ ನಮ್ಮ ಸಂಘಟನೆಯ ಮುಖಾಂತರ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ಮಾಡಿ ಜನರೇ ಸೇವೆ ಮಾಡಲು ನಾವು ಸದಾ ಸಿದ್ದರೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಘಟಕದ ಜಿಲ್ಲಾ ಸಂಯೋಜಕ ಶಿವರಾಜ್ ಹಮಲ್ಪೂರ್. ಜಿಲ್ಲಾ ಉಪಾಧ್ಯಕ್ಷರಾದ ಅಂಬದಾಸ್ ಬೇಲೂರ. ಜಿಲ್ಲಾ ಕಾರ್ಯದರ್ಶಿ ಜೇಮ್ಸ್ ಇಶ್ಲಾಂಪುರ್. ಜಿಲ್ಲಾ ಕಾರ್ಯಕರ್ಣಿ ಸದಸ್ಯ ಕಮಲಹಾಸನ್ ಸೇರಿದಂತೆ ಸಂಘದ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ :- ಸೂರ್ಯಕಾಂತ್