ಸಿಂಧನೂರು :- ನಗರದ ಸುಕಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿ ದಿಡೀರನೆ ಮೊಸಳೆ ಪ್ರತ್ಯಕ್ಷವಾಗಿದೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ಮನೆ ಮಾಡಿದೆ ಜನಗಳ ಸುಳಿವು ಇಲ್ಲದ ಸಮಯದಲ್ಲಿ ಮೊಸಳೆ ನೀರಿನಿಂದ ದಡಕ್ಕೆ ಬರುತ್ತಿದ್ದನ್ನು ಕುರಿಗಾಯಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ ಕೆಲವು ದಿನಗಳ ಹಿಂದೆ ಮೊಸಳೆ ಕುರಿಯೊಂದನ್ನು ಬಲಿ ಪಡೆದಿತ್ತು ಇದೇ ಹಳ್ಳದಲ್ಲಿ ಮಹಿಳೆಯರು.ಅಗಸಿಗರು ಬಟ್ಟೆ ತೊಳೆಯುವುದಕ್ಕೆ ದಿನಾಲು ಹೋಗುತ್ತಾರೆ.
ಈ ಹಿನ್ನೆಲೆಯಲ್ಲಿ ಜನಗಳಲ್ಲಿ ಭಯದ ವಾತಾವರಣ ಇದ್ದು. ಅರಣ್ಯ ವಲಯ ಅಧಿಕಾರಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಮೂಲಕ ಮೊಸಳೆ ಪ್ರತ್ಯಕ್ಷವಾದ ಪ್ರದೇಶದಲ್ಲಿ ಎಚ್ಚರಿಕೆ ಬ್ಯಾನರ್ ಅಳವಡಿಸಿದರು. ತದನಂತರ “ನಮ್ಮ ಕರ್ನಾಟಕ ಸೇನೆ” ಕಾರ್ಯಕರ್ತರು ಮೊಸಳೆಯನ್ನು ಬೇಗನೆ ಸೆರೆ ಹಿಡಿಯುವಂತೆ ತಾಲೂಕ ಅರಣ್ಯ ಅಧಿಕಾರಿ ಅವರ ಮೂಲಕ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳು ಮಾನ್ವಿ.. ಜಿಲ್ಲಾ ರಾಯಚೂರು ಅವರಿಗೆ ಮನವಿ ಪತ್ರ ರವಾನಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ- ನಮ್ಮ ಕರ್ನಾಟಕ ಸೇನೆ. ರಾಜ್ಯ ಘಟಕ ಕಾರ್ಯಧ್ಯಕ್ಷರಾದ – ಉಮೇಶ್ ಗೌಡ. ಹರಳಹಳ್ಳಿ.. ತಾಲೂಕು ಘಟಕ ಅಧ್ಯಕ್ಷರಾದ – ಮಂಜುನಾಥ್ ಗಾಣಿಗೇರ್.. ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ. ಬೂದೇಶ.. ಜಿಲ್ಲಾ ಸಂಚಾಲಕ . ಹುಸೇನ್ ಬಾಷಾ.. ಜಿಲ್ಲಾ ಉಪಾಧ್ಯಕ್ಷ. ರಾಘವೇಂದ್ರ.. ಇದ್ದು ಸ್ಥಳೀಯರಾದ- ಮಂಜುನಾಥ ಗುರುವಿನ ಮಠ.. ದುರ್ಗೇಶ್ ಕೋಣದ್… ವೀರೇಶ್ ಹಾಗೂ ಕುರಿ ಗಾಯಗಳು ಇದ್ದರು.
ವರದಿ:- ಬಸವರಾಜ ಬುಕ್ಕನಹಟ್ಟಿ