ಹೈದರಾಬಾದ್ : ಬಿಸಿನೀರಿಗಾಗಿ ವಾಟರ್ ಹೀಟರ್ ಬಳಸುವವರೇ ಎಚ್ಚರ, ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮೊಹಮ್ಮದ್ ನಗರ ಮಂಡಲದ ತುಂಕಿಪಲ್ಲಿಯಲ್ಲಿ ವ್ಯಕ್ತಿಯೊಬ್ಬರು ವಾಟರ್ ಹೀಟರ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗ್ರಾಮದ ರಾವುತ್ತು ಸೈಲು ಅವರು ಹೈದರಾಬಾದ್‌ಗೆ ಹೋಗುವಾಗ ಸ್ನಾನಕ್ಕೆಂದು ಬಕೆಟ್‌ನಲ್ಲಿ ವಾಟರ್ ಹೀಟರ್ ಹಾಕಿದ್ದರು.
ಸ್ವಲ್ಪ ಸಮಯದ ನಂತರ, ನೀರು ಬೆಚ್ಚಗಾಗುತ್ತಿದೆಯೇ ಎಂದು ನೋಡಲು ಅವರು ಹೀಟರ್ ಅನ್ನು ಹೊರತೆಗೆಯಲು ಪ್ರಯತ್ನಿಸಿದರು. ಈ ವೇಳೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಣಸುವಾಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಸೈಲು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಪುತ್ರ ಸತೀಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.