Ad imageAd image

ಗೃಹಲಕ್ಷ್ಮಿ ಹಣ ಕೂಡಿಟ್ಟುಕೊಂಡು ಬಟ್ಟೆ ವ್ಯಾಪಾರ ಆರಂಭಿಸಿದ ಮಹಿಳೆ 

Bharath Vaibhav
ಗೃಹಲಕ್ಷ್ಮಿ ಹಣ ಕೂಡಿಟ್ಟುಕೊಂಡು ಬಟ್ಟೆ ವ್ಯಾಪಾರ ಆರಂಭಿಸಿದ ಮಹಿಳೆ 
WhatsApp Group Join Now
Telegram Group Join Now

ಬೆಳಗಾವಿ: ಕಾಂಗ್ರೆಸ್‌ ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ಹಲವು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ.

ಈ ಹಿಂದೆ ಗೃಹಲಕ್ಷ್ಮಿಯ ಹಣ ಕೂಡಿಟ್ಟು ಫ್ರಿಜ್‌, ಅಂಗಡಿ ಹಾಕಿದ ಸುದ್ದಿಗಳನ್ನು ಓದಿದ್ದೇವೆ. ಇದೇ ಸಾಲಿಗೆ ಮತ್ತೊಂದು ಸುದ್ದಿಯೊಂದು ಸೇರಿದೆ.

ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟುಕೊಂಡು ಬಟ್ಟೆ ವ್ಯಾಪಾರ ಆರಂಭಿಸಿದ್ದಾರೆ. ಈ ಸುದ್ದಿ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್‌ ಮಾಡಿಕೊಂಡ ಸಚಿವೆ, ಅರಭಾವಿ ವಿಧಾನಸಭಾ ಕ್ಷೇತ್ರದ ಮೂಡಲಗಿ ಪಟ್ಟಣದ ನಿವಾಸಿ ಆಶಾ ಸು. ತಳವಾರ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡು, ಬದುಕು ಕಟ್ಟಿಕೊಂಡಿರುವುದನ್ನು ಕೇಳಿ, ಖುಷಿಯಾಯಿತು.

ಗೃಹಲಕ್ಷ್ಮೀ ಯೋಜನೆ ಇಂದು ಲಕ್ಷಾಂತರ ಮಹಿಳೆಯರ ಕನಸುಗಳನ್ನು ಸಾಕಾರಗೊಳಿಸಿ, ನೆಮ್ಮದಿಯ ಜೀವನ ನಡೆಸಲು ದಾರಿ ಮಾಡಿಕೊಟ್ಟಿದೆ. ನಿಮ್ಮ ಜೀವನದಲ್ಲೂ‌ ಗೃಹಲಕ್ಷ್ಮಿ ‌ಯೋಜನೆಯಿಂದಾದ ಪ್ರಯೋಜನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!