ಬೆಳಗಾವಿ: ನಗರದ ದರ್ಬಾರ್ ಗಲ್ಲಿಯಲ್ಲಿ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಹಾಕಲಾದ ಪ್ಯಾಲೆಸ್ಟೈನ್ ಧ್ವಜ ಹೋಲುವ ಪೇಂಡಾಲನ್ನು ಪೊಲೀಸ ಇಲಾಖೆ ಅವರು ತೆರವುಗೊಳಿಸಿದರು.
ಗಣೇಶೋತ್ಸವದ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆಯನ್ನು ಗಣೇಶೋತ್ಸವ ಮುಗಿದ ಮೇಲೆ ಆಚರಿಸುವ ನಿರ್ಣಯವನ್ನು ಮುಸ್ಲಿಂ ಸಮಾಜವು ತೆಗೆದುಕೊಂಡಿತ್ತು.
ಅದರಂತೆ ಭಾನುವಾರದಂದು ಮುಸ್ಲಿಂ ಸಮಾಜ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಸಲಿದೆ. ಇದಕ್ಕಾಗಿ ನಗರದೆಲ್ಲೆಡೆ ಪೂರ್ವ ಸಿದ್ಧತೆಗಳು ಆರಂಭಗೊಂಡಿವೆ.
ನಗರದ ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ಟೈನ್ ಧ್ವಜವನ್ನು ಹೋಲುವ ಪೆಂಡಾಲ್ ಹಾಕಲಾಗಿತ್ತು. ಇದರ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆಯೂ ಪೇಂಡಾಲನ್ನು ತೆರವುಗೊಳಿಸಿದೆ.
ರಾಜ್ಯದಲ್ಲಿ ಪ್ಯಾಲೆಸ್ಟೈನ್ ಧ್ವಜ ವಿವಾದ ಭಾರೀ ಸದ್ದು ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಬೈಕ್ ನಲ್ಲಿ ಅಪ್ರಾಪ್ತರು ಪ್ಯಾಲೆಸ್ಟೈನ್ ಬಾವುಟ ಹಿಡಿದು ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಾಗಮಂಗಲ ಗಲಭೆ ಬೆನ್ನಲ್ಲೇ ನಡೆದಿರುವ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.