ಮೊಳಕಾಲ್ಮುರು:- ಚಿತ್ರದುರ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪಾಲ್ಕೊಂಡ ಮೇಲಿನ ಕಣಿವೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಗೆದ್ದು ಬಿಗಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಶನಿವಾರ ಬೆಳಿಗ್ಗೆ 11:30 ಕ್ಕೆ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಭಾಗಿಯಾದ ಮೊಳಕಾಲ್ಮೂರು ತಾಲೂಕಿನ ಮೇಲಿನ ಕಣಿವೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯಾ ಮಕ್ಕಳು ಹೊಸದುರ್ಗದ ಸರ್ಕಾರಿ ಶಾಲೆಯ ತಂಡವನ್ನು 9 ಅಂಕಗಳಿಂದ ಮಣಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಡ್ಡಗಾಡು ಪ್ರದೇಶದಿಂದ ತಾಲೂಕು ಕೇಂದ್ರದಿಂದ ದೂರ ಇರುವ ಪಂಪೆಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೇಲಿನ ಕಣಿವೆ ಕುಗ್ರಾಮದ ವಿದ್ಯಾರ್ಥಿಗಳ ಈ ಸಾಧನೆಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಬಿಇಒ ನಿರ್ಮಲಾದೇವಿ ಸಂತೆಗುಡ್ಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಎನ್ ಗೋವಿಂದ ಸ್ಥಳೀಯ ಗ್ರಾಮಸ್ಥರು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ,
ಕಬಡ್ಡಿ ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮೇಲಿನ ಕಣಿವೆ ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿನಿಯರ ಈ ಸಾಧನೆಯು ನಮ್ಮ ಭಾಗದಲ್ಲಿ ನಿಜಕ್ಕೂ ಒಂದು ಮೈಲಿಗಲ್ಲು, ವಿದ್ಯಾರ್ಥಿಗಳ ಗೆಲುವಿಗಾಗಿ ಶಾಲೆಯ ಶಿಕ್ಷಕರು ಬಹಳಷ್ಟು ಶ್ರಮಿಸಿದ್ದರು, ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ವಿದ್ಯಾರ್ಥಿನಿಯರು ಈ ಸಾಧನೆಯು ನಮ್ಮ ಗ್ರಾಮಕ್ಕೆ ಕಳಶಪ್ರಾಯವಾಗಿದೆ ಎಂದು ಸಂತೆಗುಡ್ಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಎನ್ ಗೋವಿಂದ ಹೇಳಿದರು.
ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷರಾದ ಜಿ.ಪರಮೇಶ್ವರಪ್ಪ ಹಾಗೂ ಎಸ್ ಡಿಎಂಸಿ ಸದಸ್ಯರಾದ ರಮೇಶ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶಿವಣ್ಣ,ಸಹ ಶಿಕ್ಷಕರಾದ ಗಣೇಶ ಜಿ,ತಿಪ್ಪೇರುದ್ರಪ್ಪ. ಎ ಕೆ.
ಕಬಡ್ಡಿ ಕ್ಯಾಪ್ಟನ್ ಎಂಆರ್ ಮೋನಿಕ. ಆಟಗಾರರಾದ ಸುಶ್ಮಿತಾ.ಕಲ್ಪನ.ಮಹಾಲಕ್ಷ್ಮಿ.ಪವಿತ್ರ.ಗಂಗೋತ್ರಿ
ಸೇರಿದಂತೆ ಹಲವರಿದ್ದರು.
ವರದಿ :-ಪಿಎಂ ಗಂಗಾಧರ