Ad imageAd image

ಲಂಚ ಕೊಟ್ಟವರಿಗೆ ಮಾತ್ರ ಅಥಿತಿ ಶಿಕ್ಷಕರ ನೇಮಕ ಇಲ್ಲವಾದರೆ ಇಲ್ಲಸಲ್ಲದ ಆರೋಪ: ಭೀಮಮ್ಮ ಶಿಕ್ಷಕಿ.

Bharath Vaibhav
ಲಂಚ ಕೊಟ್ಟವರಿಗೆ ಮಾತ್ರ ಅಥಿತಿ ಶಿಕ್ಷಕರ ನೇಮಕ ಇಲ್ಲವಾದರೆ ಇಲ್ಲಸಲ್ಲದ ಆರೋಪ: ಭೀಮಮ್ಮ ಶಿಕ್ಷಕಿ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಮದನಾ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸಿ,ಆರ್,ಪಿ ವೀರಣ್ಣ ಗೌಡ, ಎಸ್ಡಿಎಂಸಿ ಅಧ್ಯಕ್ಷ ಭೀಮಯ್ಯ ಮತ್ತು ಶಾಲೆಯ ಮುಖ್ಯ ಗುರುಗಳಾದ ಗೋವಿಂದಪ್ಪ ಅವರದ್ದೆ ದೌರ್ಜನ್ಯ ಅತಿ ಹೆಚ್ಚಾಗಿ ನಡೆಯುತ್ತಿದೆ ಎಂದು ಭೀಮಮ್ಮ ಅಥಿತಿ ಶಿಕ್ಷಕರು ಹೇಳಿಕೆ ನೀಡಿದ್ದಾರೆ.

ಕಾರಣ ಅದೇ ಶಾಲೆಯಲ್ಲಿ ಸತತ ಮೂರು ವರ್ಷಗಳಿಂದ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಿಮಮ್ಮ ಅವರಿಗೆ ಸದ್ಯಕ್ಕೆ ಶಾಲೆಯಿಂದ ತೆರವುಗೊಳಿಸಿದ್ದಾರೆ.

ಈ ಹಿಂದೆ ಅತಿಥಿ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ ನಮ್ಮಲ್ಲಿ ವಿಡಿಯೋ ಮತ್ತು ಫೋಟೋಗಳು ಇದಾವೆ ಎಂದು ಆರೋಪಗಳನ್ನು ಮಾಡಿ ಅಥಿತಿ ಶಿಕ್ಷರನ್ನು ಅಮಾನತು ಮಾಡುತ್ತೇವೆ ಎಂದು ಹೇಳಿದರು ಆದರೆ ತಪ್ಪು ಮಾಡಿದ ಅದೇ ಅಥಿತಿ ಶಿಕ್ಷಕರಿಗೆ ಅದೇ ಸಿ,ಆರ್,ಪಿ ಮತ್ತು ಈ ಶಾಲೆಯ ಮುಖ್ಯ ಗುರುಗಳು ಬೇರೊಂದು ಶಾಲೆಯಲ್ಲಿ ಸೇರ್ಪಡೆಯಾಗಲು ಸಹಾಯ ಮಾಡಿದ್ದಾರೆ.ಅಷ್ಟೇ ಅಲ್ಲದೆ ನನ್ನನು ಪುನಃ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ವಿಶ್ವಾಸ ಕೊಟ್ಟು ನಂತರ ಬೇರೆಯವರಿಗೆ ಆ ಸ್ಥಾನ ನೀಡಿರುತ್ತಾರೆ.

ಶಾಲೆಯಲ್ಲಿ ಅಥಿತಿ ಶಿಕ್ಷಕರು 6ಜನ ಇದ್ದರು ಅದರಲ್ಲಿ ಮೂರು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ವಿದ್ಯಾರ್ಥಿಗಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದಾಗ ಅದಕ್ಕೆ ಕರಣವಾದವರನ್ನು ಶಾಲೆಯಿಂದ ತೆಗೇಬೇಕಿತ್ತು ಆದರೆ ತಪ್ಪು ಮಾಡಿದವರಿಗೆ ಬೇರೊಂದು ಕಡೆ ಇವರೇ ಅವಕಾಶ ಕಲ್ಪಿಸಿಕೊಟ್ಟಿದ್ದು ಅನುಮಾನಾಸ್ಪದವಾಗಿದೆ ಎಲ್ಲರಿಗೆ ಅವಕಾಶ ಮಾಡಿ ಕೊಟ್ಟಿರುವ ಇವರು ನನಗೇಕೆ ಮಾಡಿಕೊಟ್ಟಿಲ್ಲ ಬುದು ನನ್ನ ಪ್ರಶ್ನೆಯಾಗಿದೆ ಎಂದು ಭಿಮಾಮ್ಮ ಪ್ರಶ್ನಿಸಿದಳು.

ಕಾರಣ ಏನಂತ ತಿಳಿಯುವ ಪ್ರಯತ್ನ ಮಾಡಿದಾಗ ನನಗೆ ಗೊತ್ತಾಗಿದ್ದು ಅವರು ಎಲ್ಲಾರ ಜೊತೆ ಲಂಚ ಪಡೆದು ಆಯಾ ಉದ್ಯೋಗವನ್ನು ನೀಡಿದ್ದಾರೆ ಎಂದು ತಿಳಿದಿದೆ.ಸುಮಾರು 1600 ರೂಪಾಯಿ ಲಂಚ ಪಡೆದು ಆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.

ಈ ವಿಷಯ ಕುರಿತು ಸಂಬಂಧಪಟ್ಟ ಶಿಕ್ಷಕರನ್ನು ಮತ್ತು ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಸೇಡಂ ತಾಲೂಕ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿ ಸುಮಾರು 3ತಿಂಗಳು ಆಯಿತು ಆದರೆ ಅವರ ಕರೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಕಾರಣ ಯಾಕೆ ಅಂತ ತಿಳಿಯುತ್ತಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಈ ರೀತಿ ನಡೆದುಕೊಂಡಾಗ ನಮ್ಮ ಗೋಳನ್ನು ಯಾರಿಗೆ ಹೇಳಬೇಕು ಎಂದು ಭೀಮಮ್ಮ ಅವರು ಪಾತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ.

ನಾನು ಒಬ್ಬ ಹೆಣ್ಣು ನಾನು ಬಡ ಕುಟುಂಬದಿಂದ ಬಂದವಳು ನಾನು 1600ರೂಪಾಯಿ ಲಂಚ ಎಲ್ಲಿಂದ ತರಬೇಕು ನನಗೆ ಅಷ್ಟು ಶಕ್ತಿ ಇಲ್ಲ ದಯವಿಟ್ಟು ನನ್ನ ಗೋಳನ್ನು ಕೇಳಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಭೀಮಮ್ಮ ತನ್ನ ಮನದಾಳದ ನೋವನ್ನು ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!