ಮುದಗಲ್ಲ :- ಪೌರ ಕಾರ್ಮಿಕರ ಶ್ರಮದಿಂದಾಗಿ ಪಟ್ಟಣದಲ್ಲಿ ರೋಗರುಜಿನ ನಿಯಂತ್ರಣವಾಗುತ್ತಿದೆ. ಅವರು ಮಾಡುವ ಕೆಲಸಕ್ಕೆ ಏನು ಕೊಟ್ಟರು ಸಾಲದು’ ಎಂದು ಪುರಸಭೆ ಯ ಕಂದಾಯ ನಿರೀಕ್ಷಕರಾದ ಜೇಸ್ ಪಾಲ್ ಸಿಂಗ್ ಹೇಳಿದರು ಪಟ್ಟಣದ ಪುರಸಭೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪುರಸಭೆ ಸಿಬ್ಬಂದಿ ಚನಮ್ಮ ದಳವಾಯಿ ಹಿರೇಮಠ ಅವರು ಲಿಂಗವಂತ ಧಮ೯ದ ನಾಯಕಿ ಶರಣೆ ಸತ್ಯಕ್ಕ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿದ್ದರು.
ನಂತರ ಮಾತನಾಡಿದ ಕಿರಿಯ ನೈಮಲ್ಯ ಅಧಿಕಾರಿ ಜಾಕೀಯಾ ರೈಮತ್ ಹುನ್ನಿಸಾ ಬೇಗಂ ,ಪೌರ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಉಂಟಾದರೂ ಅದನ್ನು ಬಗೆಹರಿಸುವಲ್ಲಿ ಪುರಸಭೆ ಅಧಿಕಾರಿಗಳು ಷಮ ಹಾಗೂ ಆಡಳಿತ ಸದಾಸಿದ್ಧವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಜೇಸ್ ಪಾಲ್ ಸಿಂಗ್, ಸಿಬ್ಬಂದಿಗಳಾದ ಚನ್ನಮ್ಮ ಹಿರೇಮಠ , ಜಾಕೀಯಾ ರೈಮತ್ ಹುನ್ನಿಸಾ ಬೇಗಂ , ಪೌರ ಕಾರ್ಮಿಕ ರಾದ ಹುಲಗಪ್ಪ, ಬಸವರಾಜ ಕಟ್ಟಿಮನಿ, ಸಂಜೀವಪ್ಪ , ರವಿ , ಅಮರೇಶ,ನಾಗರಾಜ,ವಿನೋದ,ಸಂಜೀವಪ್ಪ,ಸರಸ್ವತಿ ,ರತ್ನಮ್ಮ,ಮಲ್ಲಮ್ಮ,ಬಸಮ್ಮ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ