ರಾಮದುರ್ಗ:-ತಾಲೂಕಿನ ವೀರರಾಣಿ ಕಿತ್ತೂರು ಚನ್ನಮ್ಮ ಶಾಲೆಯಲ್ಲಿ ಇಂದು ಪೌರಾಡಳಿತ ನಿರ್ದೇಶನಾಲಯ, ಪುರಸಭೆ ಕಾರ್ಯಾಲಯ ರಾಮದುರ್ಗ ಇವರು ವತಿಯಿಂದ ಇಂದು ಸ್ವಚ್ಛತೆಯೇ ಸಾಕ್ಷಾಹಿ ಮಿತ್ರ ಸುರಕ್ಷಾ ಶಿಬಿರ ಸೇವೆ, ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ವೀರರಾಣಿ ಕಿತ್ತೂರು ಚೆನ್ನಮ್ಮ ಕನ್ನಡ ಶಾಲೆಯ ಮೈದಾನದಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಇವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು,
ಈ ಕಾರ್ಯಕ್ರಮದಲ್ಲಿ ಪುರಸಭೆಯ ಆರೋಗ್ಯಾಧಿಕಾರಿ ಚಂದನ್ ಪಾಟೀಲ್ ಮಾತನಾಡಿ ಸ್ವಚ್ಛತಾ ಸಿಬ್ಬಂದಿಯವರಿಗೆ ಪ್ರತಿನಿತ್ಯ ಮಾಡುವ ಕೆಲಸದಿಂದ ಒಂದು ದಿನ ಅವರು ಸಂತೋಷದಿಂದ ಈ ಆಟದಲ್ಲಿ ಪಾಲ್ಗೊಂಡಿದ್ದು ಸಂತಸದ ವಿಷಯ ಎಂದು ಹೇಳಿದರು. ವೀರರಾಣಿ ಕಿತ್ತೂರ ಚೆನ್ನಮ್ಮ ಶಾಲೆಯ ಆಡಳಿತ ಅಧಿಕಾರಿ ಗಂಗಾಧರ ಭೋಸಲೆ ಮಾತನಾಡಿ ಪೌರಕಾರ್ಮಿಕರು ಪ್ರತಿದಿನ ತಮ್ಮ ಆರೋಗ್ಯ ಬದಿಗಿಟ್ಟು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಪ್ರತಿನಿತ್ಯ ಕಾರ್ಯನಿರ್ವಹಿಸಿ ನಗರವನ್ನು ಸ್ವಚ್ಛತವಾಗಿ ಇಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ, ಪೌರಕಾರ್ಮಿಕರಿಗೆ ಆಟಗಳನ್ನು ಏರ್ಪಡಿಸಿದ್ದು ಪುರಸಭೆಯವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು,
ವೇದಿಕೆಯ ಮೇಲೆ ಬಸು ನಿಶಾನ್ದಾರ್ ರೇಣುಕಾ ಹಲಗಿ , ಸಂಜು ರಾಠೋಡ್, ಮೇಘರಾಜ್ ಭಂಗಿ, ಮುಂತಾದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು, ಪೌರಕಾರ್ಮಿಕರು ಸಂಗೀತ ಮಾದರ,
ಕುರ್ಚಿ, ಲಿಂಬು ಚಮಚೆ, ಬಾಟಲಿಯಲ್ಲಿ ನೀರು ತುಂಬುವುದು, ಗೋಣಿಚೀಲಾ ಆಟ, ಹಗ್ಗ ಜಗ್ಗು ಆಟ ಹಾಗೂ ಕಬಡ್ಡಿ ಆಟಗಳನ್ನು ಆಡಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು, ಎಲ್ಲ ಪೌರಕಾರ್ಮಿಕರು ಅತ್ಯಂತ ಉತ್ಸಾಹದಿಂದ ಈ ಆಟಗಳಲ್ಲಿ ಭಾಗವಹಿಸಿದ್ದರು
ವರದಿ:-ಮಂಜುನಾಥ ಕಲಾದಗಿ