ಸಿಂಧನೂರು : -ನಗರದ ಉನ್ನತಿ ಖರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಕಲಪೇಟೆ ಯಲ್ಲಿ 2023 ಮತ್ತು 24ನೇ ಸಾಲಿನ ನೂತನ (ಎಸ್ ಡಿ ಎಂ ಸಿ) ಶಾಲಾಭಿವೃದ್ದಿ ಹಾಗೂ ಮೇಲುಸ್ತುವರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ- ಹೊನ್ನೂರ ಕಟ್ಟಿಮನಿ.. ಉಪಾಧ್ಯಕ್ಷರಾಗಿ- ಶ್ರೀಮತಿ ನೇತ್ರಾವತಿ. ಆಯ್ಕೆಯಾದರು.
ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿ (ಸಿ ಆರ್ ಪಿ) ಹನುಮಂತಪ್ಪ ನವರು ಮಾತನಾಡಿ – ಶಾಲಾಭಿವೃದ್ಧಿ ಹಾಗೂ ಮೇಲುಸ್ತುವರಿ ಸಮಿತಿಯ ಜವಾಬ್ದಾರಿ ಮಹತ್ವದಾಗಿದೆ .
ಶಾಲೆಯ ಸರ್ವಾಂಗಣ ಪ್ರಗತಿಗೆ ಸಲಹೆ ಮಾಹಿತಿ ನೀಡುವ ಮೂಲಕ ಮಕ್ಕಳ ಪೋಷಕರಾಗಿ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರದೆ ವಿದ್ಯಾರ್ಥಿಗಳ ಆಸಕ್ತಿಗೆ ಅಭಿರುಚಿಗೆ ಅನುಗುಣವಾಗಿ ಕಲಿಕೆ ಪ್ರೋತ್ಸಾಹಿಸಬೇಕು ಎಂದರು. ನಂತರ ಶಾಲೆಯ ಮುಖ್ಯ ಗುರುಗಳಾದ ಗುರುಬಸಪ್ಪ ಮಾತನಾಡಿ – ಎಸ್ ಡಿ ಎಂ ಸಿ. ಅಧ್ಯಕ್ಷ – ಉಪಾಧ್ಯಕ್ಷ- ಹಾಗೂ ಸದಸ್ಯರುಗಳು ಮಕ್ಕಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಶಾಲೆಯ ಸರ್ವಗೀಣ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ – ಸಿಆರ್‌ಪಿ. ಹನುಮಂತಪ್ಪ.. ಶಾಲೆಯ ಮುಖ್ಯ ಗುರುಗಳಾದ.. ಗುರುಬಸಪ್ಪ..ಮುಖ್ಯ ಶಿಕ್ಷಕರಾದ ವೆಂಕನಗೌಡ ಅವರು ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು, ಸ್ಥಳೀಯರಾದ.ನರಸಪ್ಪ ಕಟ್ಟಿಮನಿ.. ನಾಗರಾಜ ಕವಿತಾಳ ಮಕ್ಕಳ ಪಾಲಕರು ಇನ್ನೂ ಅನೇಕರು ಇದ್ದರು..
ವರದಿ :ಬಸವರಾಜ ಬುಕ್ಕನಹಟ್ಟಿ