Ad imageAd image

ವಿಷ್ಣು,ವಾಲ್ಮೀಕಿ ಕ್ರಿಕೆಟರ್ಸ್ ವತಿಯಿಂದ ವಿಜೃಂಭಣೆಯಿಂದ ಗಣೇಶ ಉತ್ಸವ “

Bharath Vaibhav
ವಿಷ್ಣು,ವಾಲ್ಮೀಕಿ ಕ್ರಿಕೆಟರ್ಸ್ ವತಿಯಿಂದ ವಿಜೃಂಭಣೆಯಿಂದ ಗಣೇಶ ಉತ್ಸವ “
WhatsApp Group Join Now
Telegram Group Join Now

ಬೆಂಗಳೂರು : -ನಮ್ಮ ಇತಿಹಾಸದ ಆಚರಣೆಗಳು ಪ್ರಚಲಿತ ಕಾಯಿದು ಹೋಗುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಭಾರತೀಯ ಸಂಸ್ಕೃತಿ ಸಂಪ್ರದಾಯ ಪರಂಪರೆ ಉಳಿಸಿ ಬೆಳೆಸುವ ನಮ್ಮ ಯುವಕ ರಮೇಶ್ ಮತ್ತು ಅವರ ಸ್ನೇಹಿತರು ಮಾಡುತ್ತಿದ್ದಾರೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.

ಸ್ಥಳಿಯ ವಜ್ರಪ್ಪ ರಂಗಮಂದಿರದಲ್ಲಿ ವಾಲ್ಮೀಕಿ ಕ್ರಿಕೆಟರ್ಸ್, ಬಿಜೆಪಿ ಯುವ ಮೋರ್ಚಾ ವಾರ್ಡ್ ಅಧ್ಯಕ್ಷ ರಮೇಶ್ ಅವರ ಮುಂದಾಳತ್ವದಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಣೇಶನಿಗೆ ಪುಷ್ಪ ನಮನ ಅರ್ಪಿಸಿ ಕರ್ಪೂರ ಬೆಳಗಿಸಿ ಗಣೇಶ ಆಶಿರ್ವಾದ ಪಡೆದು ಸಾಯಂಕಾಲದ ವಜ್ರಪ್ಪ ರಂಗಮಂದಿರದಲ್ಲಿ ಸಾಮೂಹಿಕ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ವಿವಿಧ ಕಲಾ ತಂಡಗಳಿಂದ ಕೈಗಾರಿಕಾ ಪ್ರದೇಶ, ರಾಜಗೋಪಾಲನಗರ, ಪೀಣ್ಯ 2ನೇ ಹಂತ, ಹಾಲಿನ ಡೈರಿ, ಹೆಗ್ಗನಹಳ್ಳಿ, ಹೆಗ್ಗನಹಳ್ಳಿ ಕ್ರಾಸ್, ಸುಲಪುರದಮ್ಮ ದೇವಸ್ಥಾನ ರಸ್ತೆ ಮೂಲಕ ರಾಜಬೀದಿಗಳಲ್ಲಿ ವೀರಗಾಸೆ ನೃತ್ಯ ವಿವಿಧ ಪ್ರದರ್ಶನ ಡಿಜಿ ವಾಹನಗಳು ಹೀಗೆ ಅನೇಕ ರೂಪದಲ್ಲಿ ಗಣೇಶ ಮೆರವಣಿಗೆ ಸುಂಕದಕಟ್ಟೆ ಪೈಪ್ ಲೈನ್ ವರಿಗೆ ನಡೆಯಿತು. ಎಲ್ಲರೂ ಈ ಒಂದು ಕಾರ್ಯಕ್ಕೆ ಭಾಗವಹಿಸಿ ಕಣ್ಣು ತುಂಬಿಸಿಕೊಳ್ಳಿ ಗಣೇಶ ನ ದರ್ಶನಕ್ಕೆ ಪಾತ್ರರಾಗಿ ಎಂದು ಶಾಸಕ ಎಸ್ ಮುನಿರಾಜು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಮತ್ತು ವಾರ್ಡಿನ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮತ್ತು ವಿವಿಧ ಕಡೆಯಿಂದ ಕಲಾವಿದರು ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಾತ್ರರಾದರು.

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!